ಸುಂಟಿಕೊಪ್ಪ, ಮಾ 23: 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಸುಂಟಿಕೊಪ್ಪದಲ್ಲಿ ನಡೆಸಲು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಧಾರ ಕೈಗೊಂಡಿದೆ, ಸಮ್ಮೇಳನ ನಡೆಸುವ ಮುನ್ನ ಊರಿನ ಗಣ್ಯರ ಒಪ್ಪಿಗೆ ಪಡೆದು ಕೆಲಸ ಕಾರ್ಯಗಳನ್ನು ಪ್ರಾರಂಭಿಸಬೇಕಿದೆ. ಈ ನಿಟ್ಟಿನಲ್ಲಿ ಸುಂಟಿಕೊಪ್ಪ ಹೋಬಳಿಯ ಎಲ್ಲಾ ಸಂಘ ಸಂಸ್ಥೆಗಳ, ಸಮಾಜಗಳ ಪ್ರಮುಖರನ್ನು, ಸಮಾಜ ಸೇವಕರನ್ನು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು, ಗ್ರಾಮ ಪಂಚಾಯಿತಿಗಳ ಮಾಜಿ ಚುನಾಯಿತ ಪ್ರತಿನಿಧಿಗಳನ್ನು, ಶಿಕ್ಷಣ ಸಂಸ್ಥೆಗಳ ಪ್ರಮುಖರ ಹಾಗೂ ಸಾರ್ವಜನಿಕ ಮುಖಂಡರುಗಳ ಸಭೆಯನ್ನು ನಾಳೆ ದಿನಾಂಕ 24.03.2026 ರ ಬೆಳಗ್ಗೆ 11 ಗಂಟೆಗೆ ಸುಂಟಿಕೊಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ನಾಳೆಯ ಮಹತ್ವದ ಸಭೆಯಲ್ಲಿ ಟಿ.ಪಿ. ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಕೆಎಸ್.ಐ ಮುನೀರ್ ಆಹ್ಮದ್, ಜಿಲ್ಲಾ ಗೌರವ ಕಾರ್ಯದರ್ಶಿ, ರೇವತಿ ರಮೇಶ್ ಜಿಲ್ಲಾ ಗೌರವ ಕಾರ್ಯದರ್ಶಿ, ಎಸ್.ಎಸ್ ಸಂಪತ್ ಕುಮಾರ್ ಜಿಲ್ಲಾ ಗೌರವ ಕೋಶಾಧಿಕಾರಿ, ಜಿಲ್ಲಾ, ತಾಲೂಕು, ಹೋಬಳಿ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿರುವರು.
ಈ ಸಭೆಗೆ ಎಲ್ಲರೂ ಆಗಮಿಸಿ ಸಮ್ಮೇಳನದ ಕುರಿತು ತಮ್ಮ ಸೂಕ್ತ ಸಲಹೆಗಳನ್ನು ನೀಡಿ ಸಮ್ಮೇಳನದ ಯಶಸ್ವಿ ಗೆ ಸಹಕರಿಸಬೇಕಾಗಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರುಗಳಾದ ಕೆ.ಎಸ್ ನಾಗೇಶ್ ಹಾಗೂ , ಪಿ.ಎಫ್ ಸಭಾಸ್ಟೀನ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.




