

ಮಡಿಕೇರಿ, ಮಾ11: ಮಹದೇವ ಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಸವಿತಾ.ಭಟ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 10 ರಂದು ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾಳೆ. ನಮಗೆ ಮಾದರಿಯಾದ ಮಹಿಳೆಯರನ್ನು ದೂರದಲ್ಲಿ ಹುಡುಕ ಬೇಕಾಗಿಲ್ಲ, ನಮ್ಮ ಸುತ್ತಮುತ್ತಲೇ ಇಂತಹ ಅನೇಕ ಮಹಿಳೆಯರಿದ್ದಾರೆ . ಮಹಿಳೆಗೆ ಮುಖ್ಯವಾಗಿ ಬೇಕಾದ್ದು ಸ್ವಾತಂತ್ರ್ಯ , ನೆಮ್ಮದಿಯ ಜೀವನ ಮತ್ತು ಮನೆಯವರಿಂದ ತಾವು ಮಾಡುವ ಕೆಲಸಕ್ಕೆ ಪ್ರೋತ್ಸಾಹ . ಇಷ್ಟಿದ್ದರೆ ಮಹಿಳೆ ಏನು ಬೇಕಾದರೂ ಸಾಧಿಸಬಲ್ಲಳು ,ಸಮಾಜಕ್ಕೆ ಕೊಡುಗೆಯನ್ನು ನೀಡಬಲ್ಲಳು . ಮಹಿಳಾ ದಿನಾಚರಣೆ ಎಂಬುದು ಒಂದು ದಿನದ ಅಥವಾ ಮಾರ್ಚ್ ತಿಂಗಳಿನ ಆಚರಣೆ ಮಾತ್ರ ಆಗಿರದೆ ಮಹಿಳೆಗೆ ವರ್ಷದ ಎಲ್ಲಾ ದಿನಗಳಲ್ಲೂ ಗೌರವ ಮತ್ತು ಒಳ್ಳೆಯ ಸ್ಥಾನ ಮಾನಗಳು ಸಿಗುವಂತಾಗಬೇಕು ಎಂದು ಸವಿತಾ .ಭಟ್ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭ ಬಾಳೆಯಡ ದಿವ್ಯಾ ಮಂದಪ್ಪ ಅವರನ್ನು , ಅವರು ಮಾಡಿದ ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು . ಸಂಘದ ಸದಸ್ಯೆಯರಿಗಾಗಿ ಅಡಿಗೆ ಸ್ಪರ್ಧೆ ,ಹೂ ಜೋಡಣೆ ಸ್ಪರ್ದೆ, ಹಾಡಿನ ಸ್ಪರ್ದೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು . ತೀರ್ಪುಗಾರರಾಗಿ ರಿಶಿಕಾ ಶ್ಯಾಮ್ ಮತ್ತು ಗಾಯತ್ರಿ ಸೋಮಯ್ಯ, ಲಕ್ಷೀ ಈಶ್ವರ .ಭಟ್ ಮತ್ತು ಶ್ರೀ ರಕ್ಷಾ ಅವರುಗಳು ಕಾರ್ಯ ನಿರ್ವಹಿಸಿದರು .
ದೀಪಾಂಜಲಿ ತಂಡದವರು ಪ್ರಾರ್ಥಿಸಿದರು . ಕಾರ್ಯ ಕ್ರಮಗಳನ್ನು .ವಿದ್ಯಾ ದೇವರಾಜ್ , ಮೇಘಾ ಸುಜಯ್ ,ಶೈಲಾ ಮಂಜುನಾಥ್ ಮತ್ತು ಭಾರತಿ ರಮೇಶ್ ನಿರೂಪಿಸಿದರು . ಆಡಳಿತ ಮಂಡಳಿಯ ಸದಸ್ಯೆಯರಾದ ವಸುಂಧರಾ ಪ್ರಸನ್ನ, ಆಯಿಷಾ ಹಮೀದ್ ,ಉಮಾ ಈಶ್ವರ್ ,ಪ್ರೇಮಾ ರಾಘವಯ್ಯ ,ಜಯಶೀಲಾ ಪ್ರಕಾಶ್ ,ವಸಂತಿ ಪೂಣಚ್ಚ ಉಪಸ್ಥಿತರಿದ್ದರು .ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್ ವಂದಿಸಿದರು .




