Google search engine
Home♦️ಇತ್ತೀಚಿನ ಸುದ್ದಿಗಳು.ಕನ್ನಡ ಭಾಷೆ , ಸಾಹಿತ್ಯ ಸಮೃದ್ಧವಾಗಿ ಎಲ್ಲೆಡೆ ಪಸರಿಸಲು ಕವಿ, ಸಾಹಿತಿಗಳು ಹಾಗೂ ಕಲಾವಿದರುಗಳ  ಕೊಡುಗೆ...

ಕನ್ನಡ ಭಾಷೆ , ಸಾಹಿತ್ಯ ಸಮೃದ್ಧವಾಗಿ ಎಲ್ಲೆಡೆ ಪಸರಿಸಲು ಕವಿ, ಸಾಹಿತಿಗಳು ಹಾಗೂ ಕಲಾವಿದರುಗಳ  ಕೊಡುಗೆ ಅಪಾರ: ಮುನೀರ್ ಅಹಮದ್

ಸುಂಟಿಕೊಪ್ಪ, ಮಾ.07: ಜಗತ್ತಿನ ಹಲವಾರು ಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಮೃತ ಭಾಷೆಗಳಂತಾಗಿವೆ ಲ್ಯಾಟಿನ್, ರೋಮ್ ಭಾಷೆಗಳು ಇದಕ್ಕೆ ಉತ್ತಮ ನಿದರ್ಶನ, ಆದರೆ  ಇವೆರಡು ಭಾಷೆಗಳನ್ನು ಅಡಕವಾಗಿಸಿಕೊಂಡಿರುವ  ಆಂಗ್ಲ ಭಾಷೆ  ಜನಪದ ಭಾಷೆಯಾಗಿ  ತನ್ನ ಅಸ್ತಿತ್ವವನ್ನು  ಉಳಿಸಿಕೊಂಡಿದೆ.  ಹಾಗೆ ಕನ್ನಡ ಭಾಷೆ , ಸಾಹಿತ್ಯ ಸಮೃದ್ಧವಾಗಿ ಎಲ್ಲೆಡೆ ಪಸರಿಸಲು ಕವಿ, ಸಾಹಿತಿಗಳು ಹಾಗೂ ಕಲಾವಿದರುಗಳ  ಕೊಡುಗೆ ಅಪಾರ ಎಂದು  ಕೊಡಗು ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ  ಮುನೀರ್ ಅಹಮದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

ಕನ್ನಡ ಸಾಹಿತ್ಯ ಪರಿಷತ್ತು ಸುಂಠಿಕೊಪ್ಪ ಹೋಬಳಿ, ಕುಶಾಲನಗರ ತಾಲೂಕು ಘಟಕ  ವತಿಯಿಂದ  10ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲು ಸ್ಥಾಪಿಸಲಾಗಿರುವ ಶ್ರೀ ಎಸ್.ಎಸ್.ರಾಮಮೂರ್ತಿ ದತ್ತಿ ಹಾಗೂ ದಿ।। ಪಿ.ಎಸ್.ಬೀರಪ್ಪ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುನಿರ್ ಅಹಮದ್ ಮಾತನಾಡಿದರು.

 ಪಠ್ಯ ಪುಸ್ತಕಗಳ ನಡುವೆ ಬಚ್ಚಿಟ್ಟುಕೊಂಡು ಕಥೆ ಪುಸ್ತಕಗಳನ್ನು ಓದುತ್ತಿದ್ದ ಬಾಲ್ಯದ ಸವಿ ನೆನಪನ್ನು ಮೆಲುಕು ಹಾಕಿದ ಅವರು, ಪಠ್ಯೇತರ ಪುಸ್ತಕಗಳ ಓದುವಿಕೆ ಮಕ್ಕಳ ಜ್ಞಾನಾರ್ಜನೆ, ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯ ಅಭಿವೃದ್ಧಿಗೆ ಅತಿ ಅಗತ್ಯವಾಗಿದೆ. ಇವು ಪಠ್ಯಪುಸ್ತಕಗಳ ಮಿತಿಯನ್ನು ಮೀರಿ ಭಾಷಾ ಜ್ಞಾನ, ವಿಮರ್ಶಾತ್ಮಕ ಚಿಂತನೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತೆ  ಹಾಗೂ ಕಥೆ, ಕವನ, ವಿಜ್ಞಾನ ಮತ್ತು ಜೀವನಚರಿತ್ರೆ ಪುಸ್ತಕಗಳು ಜ್ಞಾನದ ಹರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು  ಹೇಳಿದರು.

ಮುಂದುವರೆದು ಮಾತನಾಡಿದ  ಅವರು ಜೈನ ಸಾಹಿತ್ಯ , ಶರಣ ಸಾಹಿತ್ಯ , ದಾಸ ಸಾಹಿತ್ಯ , ವಚನ ಸಾಹಿತ್ಯ , ನವೋದಯ ಸಾಹಿತ್ಯ  ಬಂಡಾಯ ಸಾಹಿತ್ಯ ಪ್ರಕಾರಗಳು ಆಯಾ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಮಹತ್ತರ ಕೊಡುಗೆ ನೀಡಿವೆ, ಹಾಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಮೋಘ ಕಾರ್ಯ ವೈಖರಿಯನ್ನು  ಈ ಸಂದರ್ಭ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಸಭಾ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿನಿಯರಾದ ಕುಮಾರಿ ಜೆ.ಎಸ್.ಪೂರ್ವಿಕಾ, ಕುಮಾರಿ ಅಫ್ರಿನಾ, ಕುಮಾರಿ ಎಸ್.ಕಾವ್ಯ, ಅವರನ್ನು ಸನ್ಮಾನಿಸಿ ಗೌರಿಸಲಾಯಿತು.

ಕಸಾಪದ  ಸುಂಠಿಕೊಪ್ಪ ಹೋಬಳಿ ಅಧ್ಯಕ್ಷರಾದ ಪಿ.ಎಫ್.ಸಬಾಸ್ಟಿನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ, ಎಂ.ಎನ್.ಕಾಳಪ್ಪ, ಕಾಫಿ ಬೆಳೆಗಾರರು, ಎಂ.ಪಿ. ಕೇಶವಕಾಮತ್ ಜಿಲ್ಲಾಧ್ಯಕ್ಷರು ಕಸಾಪ, ಕೊಡಗು. ಕೆ.ಎಸ್.ನಾಗೇಶ್ ಅಧ್ಯಕ್ಷರು ಕಸಾಪ ಕುಶಾಲನಗರ ತಾಲೂಕು ಘಟಕ, ಎನ್.ಜಿ.ಶ್ರೀನಿವಾಸ್ ವಿಜಯಾ ಪ್ಲಾಂಟೇಶನ್ಸ್ ಸುಂಠಿಕೊಪ್ಪ, ಬಾಲಕೃಷ್ಣ, ಉಪ ಪ್ರಾಂಶುಪಾಲರು ಸರ್ಕಾರಿ ಪ್ರೌಡಶಾಲೆ,ಸುಂಠಿಕೊಪ್ಪ, ಸೋಮಯ್ಯ ಮುಖ್ಯಶಿಕ್ಷಕರು ಸರ್ಕಾರಿ ಪ್ರೌಡಶಾಲೆ, ೭ನೇ ಹೊಸಕೋಟೆ ಭಾಗವಹಿಸಿದ್ದರು. ಹಾಗೂಎಸ್.ನಾಗರಾಜ್, ಟಿ.ವಿ.ಶೈಲಾ, ಪ್ರಧಾನ ಕಾರ್ಯದರ್ಶಿಗಳು, ಕಸಾಪ, ಕುಶಾಲನಗರ ತಾಲೂಕು ಘಟಕ ಕೆ.ಎಸ್.ಅನೀಲ್,  ಲೀಲಾ ಮೇದಪ್ಪ, ಪ್ರಧಾನ ಕಾರ್ಯದರ್ಶಿಗಳು ಕಸಾಪ, ಸುಂಠಿಕೊಪ್ಪ ಹೋಬಳಿ  ಕರಬಸಪ್ಪ ಹೇಮಪ್ಪ ಆಡ್ಕಣಿ,  ಗೀತ ಬಸಪ್ಪ,  ವಹೀದ್ ಜಾನ್, ಎಂ.ಎಸ್.ಸುನೀಲ್ ಉಪಾಧ್ಯಕ್ಷರು ಕಸಾಪ ಸುಂಠಿಕೊಪ್ಪ ಹೋಬಳಿ,ದೇವಿಪ್ರಸಾದ್ ಕಾಯರ್ ಮಾರ್, ಜಿ.ಬಿ.ಹರೀಶ್, ಬಿ.ಸಿ.ದಿನೇಶ್, ಸಂಘಟನಾ ಕಾರ್ಯದರ್ಶಿಗಳು ಕಸಾಪ, ಕುಶಾಲನಗರ ತಾಲೂಕು ಘಟಕಸರ್ವ ಸದ್ಯಸರು ಕುಶಾಲನಗರ ತಾಲೂಕು ಮತ್ತು ಸುಂಠಿಕೊಪ್ಪ ಹೋಬಳಿ ಕಸಾಪ , ನವೀನ ಚಿಣ್ಣಪ್ಪ , ಶಾಲೆಯ ವಿದ್ಯಾರ್ಥಿಗಳು ಹಾಗೂ  ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!