ಮಡಿಕೇರಿ, ಮಾ.6: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ಮಾಚ್೯ 9 ರಂದು ಸೋಮವಾರ ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದೆ. ವೈವಿಧ್ಯಮಯ ಕಾಯ೯ಕ್ರಮಗಳೊಂದಿಗೆ ಮಹಿಳಾ ದಿನಾಚರಣೆಯ ಸಂಭ್ರಮಾಚರಣೆ ಜರುಗಲಿದೆ.
ಮಾಚ್೯ 9 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ, ಮಹಿಳಾ ದಿನಾಚರಣೆಯನ್ನು ರೆಡ್ ಕ್ರಾಸ್ ಜಿಲ್ಲಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವಯ೯ ಆಶಯ ಭಾಷಣ ಮಾಡಲಿದ್ದಾರೆ.
ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಬಿಂದುಮಣಿ, ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ರಾಷ್ಟ್ರಪ್ರಶಸ್ತಿ ಪಡೆದ ಕೊಟ್ಟುಕೊತ್ತೀರ ಯಶೋಧ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆಯ ಉಪನಿದೇ೯ಶಕ ಪ್ರಸನ್ನ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು.
ಉದ್ಘಾಟನಾ ಸಮಾರಂಭದ ಬಳಿಕ ಆಯೋಜಿತ ವಿಚಾರಗೋಷ್ಟಿಯಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿದೇ೯ಶಕಿ ಮಿಲನಾ ಭರತ್ (ಅವಳ ಕನಸುಗಳಿಗೊಂದು ರೆಕ್ಕೆ ಕೊಡಿ) ಎಂಬ ವಿಚಾರದ ಬಗ್ಗೆ,, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮುಖ್ ಅವರು (ಆರೋಗ್ಯದ ಕಡೆ ಗಮನವಿರಲಿ) ವಿಚಾರದ ಬಗ್ಗೆ, ವೀರಾಜಪೇಟೆಯ ವಕೀಲರಾದ ಸಿಂಧೂರ ಎನ್ ಸ್ವಾಮಿ ಅವರು (ಕಾನೂನು ನಿಮಗೂ ಗೊತ್ತಿರಲಿ) ವಿಷಯದ ಬಗ್ಗೆ ಮತ್ತು ಮಡಿಕೇರಿಯ ಶಿಲ್ಪಾರೈ (ಯೋಗ ಧ್ಯಾನ ಮತ್ತು ಶಾಂತತೆ) ಸಂಬಂಧಿತ ವಿಚಾರದ ಬಗ್ಗೆ ಹಾಗೂ ಡಾಕ್ಟರ್ ಸೋಮಶೇಖರ್ (ಕ್ಯಾನ್ಸರ್ ಮಾಹಿತಿ – ಜಾಗೃತಿ) ಬಗ್ಗೆ ಮಾತನಾಡಲಿದ್ದಾರೆ.
ಕಾಯ೯ಕ್ರಮದಲ್ಲಿ ತಜ್ಞ ವೈದ್ಯರಿಂದ ಕ್ಯಾನ್ಸರ್ ತಪಾಸಣೆ ನಡೆಯಲಿದೆ.
ನೂರಾರು ಮಹಿಳೆಯರು ಪಾಲ್ಗೊಳ್ಲುವ ಈ ಕಾಯ೯ಕ್ರಮದಲ್ಲಿ ಮಹಿಳೆಯರಿಂದ ವೈವಿಧ್ಯಮಯ ಸಾಂಸ್ಕೖತಿಕ ಕಾಯ೯ಕ್ರಮಗಳೂ ಆಯೋಜಿತವಾಗಿದೆ ಎಂದು ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಬಿ.ಕೆ. ರವೀಂದ್ರ ರೈ. ಉಪಾಧ್ಯಕ್ಷರಾದ ಅನಿಲ್ ಹೆಚ್.ಟಿ., ಪ್ರಧಾನ ಕಾಯ೯ದರ್ಶಿ ಎಂ.ಧನಂಜಯ್, ಖಜಾಂಜಿ ಪ್ರಸಾದ್ ಗೌಡ ತಿಳಿಸಿದ್ದಾರೆ.




