Google search engine
Home♦️ಇತ್ತೀಚಿನ ಸುದ್ದಿಗಳು.ಹಾರಂಗಿ ಬಳಿ ನೂತನ ಸೇತುವೆಯ ಉದ್ಘಾಟನೆ, ಹಾಗೂ 125 ಕೋಟಿ ವೆಚ್ಚದ  ರೀ-ಮಾಡಲಿಂಗ್ ಕಾಮಗಾರಿಗಳಿಗೆ ಗುದ್ದಲಿ...

ಹಾರಂಗಿ ಬಳಿ ನೂತನ ಸೇತುವೆಯ ಉದ್ಘಾಟನೆ, ಹಾಗೂ 125 ಕೋಟಿ ವೆಚ್ಚದ  ರೀ-ಮಾಡಲಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರಾದ ಡಾಕ್ಟರ್ ಮಂತರ್ ಗೌಡ

ಹಾರಂಗಿ. ಮಾ.1:  ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿ ಎಡದಂಡೆ ಮುಖ್ಯನಾಲಾ ಸರಪಳಿ ಹಾಗೂ ವಿತರಣಾ ನಾಲೆಯ ಆಯ್ದ ಭಾಗಗಳಲ್ಲಿ 125 ಕೋಟಿ ವೆಚ್ಚದ  ರೀ-ಮಾಡಲಿಂಗ್ ಕಾಮಗಾರಿಗೆ  ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡ ಅವರು ಇಂದು  ಗುದ್ದಲಿ ಪೂಜೆ ನೆರವೇರಿಸಿದರು.

ಆ ಬಳಿಕ ಹಾರಂಗಿ ಜಲಾಶಯದ ಸಮೀಪ  ಕುಶಾಲನಗರ  ಸಂಪರ್ಕಿಸುವ ರಸ್ತೆಯ ಅಡ್ಡಲಾಗಿ  ಅಂದಾಜು ಒಂದು ಕೋಟಿ ರೂಪಾಯಿಗಳ  ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹಾರಂಗಿ ಜಲಾಶಯದಿಂದ ನೀರು ಸರಬರಾಜಾಗುವ ನಾಲೆಗಳಲ್ಲಿ ಹಲವಾರು ವರ್ಷಗಳಿಂದ ನೀರಿನ ಹರಿವು ಹಾಗೂ ಅತಿಯಾದ ಮಳೆಯಿಂದಾಗಿ ಕಾಲುವೆಗಳು ಲೈನಿಂಗ್ ಹಾಗೂ ರಿವೆಟ್‌ಮೆಂಟ್ ಶಿಥಿಲಗೊಂಡು  ವಿನ್ಯಾಸ ಕಳೆದುಕೊಂಡಿವೆ  ಹಾಗೂ ಹೂಳು ತುಂಬಿ, ಗಿಡಗಂಟೆಗಳು ಬೆಳೆದು ನೀರು ಹರಿಯುವ ಸಾಮರ್ಥ್ಯ ಕಡಿಮೆಯಾಗಿ  ಆಚ್ಚುಕಟ್ಟು ಪ್ರದೇಶಕ್ಕೆ ಸರಾಗವಾಗಿ ನೀರು ಹರಿಸಲು ಸಾಧ್ಯವಾಗದ ಹಿನ್ನಲೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಆದುದರಿಂದ ನಾಲೆಗಳ ರೀ-ಮಾಡಲಿಂಗ್ ಕಾಮಗಾರಿಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು  ಪ್ರಥಮ ಹಂತದಲ್ಲಿ ಸರವಳಿ 1.11 ಕಿ.ಮೀ. ಯಿಂದ ಸರಪಳಿ 6.875 ಕಿ.ಮೀ. ವರೆಗೆ ರೀ-ಮಾಡಲಿಂಗ್ ಕಾಮಗಾರಿಯನ್ನು  ಹಾಗೂ ಎರಡನೇ ಹಂತದಲ್ಲಿ ಸರಪಳಿ 6.875 ಕಿ.ಮೀ. ರಿಂದ ಸರಪಳಿ 14.75 ಕಿ.ಮೀ. ವರೆಗೆ ಸುಮಾರು 125 ಕೋಟಿ ವೆಚ್ಚದಲ್ಲಿ ರೀ-ಮಾಡಲಿಂಗ್ ಕಾಮಗಾರಿ ಮಾಡಲಾಗುವುದು  ಎಂದು ತಿಳಿಸಿದರು.

ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ, ಸದಸ್ಯರು ವಕ್ತಾರ ಎಂ.ಲಕ್ಷ್ಮಣ್, ಕೆ.ಪಿ ಚಂದ್ರಕಲಾ, ತಹಶೀಲ್ದಾರ್ ಕಿರಣ್ ಗೌರಯ್ಯ,  ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಸೂಪರಿಂಟೆಂಡೆಂಟ್ ಎಂಜಿನಿಯರ್ ಸತೀಶ್, ಕಿರಣ್ ದೇವಯ್ಯ, ಅಸಿಸ್ಟೆಂಟ್ ಇಂಜಿನಿಯರ್ ಸೌಮ್ಯ, ಅನ್ನಪೂರ್ಣ, ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಕೆ.ಎಸ್.ಕೃಷ್ಣಗೌಡ, ಟಿ.ಬಿ.ಜಗದೀಶ್‌, ಟಿ.ಕೆ. ಪಾಂಡುರಂಗ,ಉಮಾ ಪ್ರಭಾಕರ್,ಎಸ್.ಎಸ್.ಚಂದ್ರಶೇಖ‌ರ್, ರಾಜಶೇಖ‌ರ್, ಅನಂತ್,ಪುಷ್ಪಲತಾ, ಹಮೀದ್, ಶೋಭಾ ಪುಟ್ಟಪ್ಪ, ಪ್ರೇಮಲೀಲ, ಗೋವಿಂದಪ್ಪ, ಗುತ್ತಿಗೆದಾರರಾದ ಸಿ.ಬಿ ಚಕ್ರವರ್ತಿ ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರುಗಳು, ಪಕ್ಷದ ವಿವಿಧ ಘಟಕಗಳ ಪ್ರಮುಖರು, ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು, ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!