Google search engine
Home♦️ ಶಿಕ್ಷಣ ,ಆರೋಗ್ಯ,, ಗ್ರಾಮ ಪಂಚಾಯತಿಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷರಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ...

ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷರಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಕುರಿತಾಗಿ ಭೋದನೆ.

ಕುಶಾಲನಗರ ಜ.28:  ಇಂದು ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಪೊಲೀಸ್ ಇಲಾಖೆ ವತಿಯಿಂದ ಕಾನೂನು  ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾದ   ದಿನೇಶಕುಮಾರ್  ರವರು ಕಾನೂನು ಅರಿವು ಕಾರ್ಯಕ್ರಮ ನಡೆಸಿಕೊಟ್ಟರು.  ಮಕ್ಕಳೊಂದಿಗೆ ಸಂವಾದದಲ್ಲಿ ತೊಡಗಿಕೊಂಡ ಅವರು ಮಕ್ಕಳಿಗೆ ಕಾನೂನಿನ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಿದರು ಪ್ರಮುಖವಾಗಿ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮಗಳು ಹಾಗೂ ವಾಹನ ಚಲಾಯಿಸುವಾಗ ಆಗುವಂತಹ ಅಪಘಾತ ಹಾಗೂ ಸುರಕ್ಷತೆಯ ಬಗ್ಗೆ  ಅರಿವು ಮೂಡಿಸಿದರು. ಹಾಗೂ ಮಕ್ಕಳಿಗೆ ರಸ್ತೆ ಸುರಕ್ಷತೆಯ ಪಾಲಿಸುವ ಪ್ರಮಾಣವಚನ ಬೋಧಿಸುವುದರೊಂದಿಗೆ ವಸತಿ ಶಾಲೆಯ ಸಿಬ್ಬಂದಿಗಳಿಗೆ ಪೊಲೀಸ್ ಸುರಕ್ಷೆಯ ಭರವಸೆಯನ್ನು ನೀಡಿದರು .

 ಈ ಸಂದರ್ಭದಲ್ಲಿ ವಸತಿ ಶಾಲೆಯ ಅಧ್ಯಾಪಕ ವೃಂದ, ಸಿಬ್ಬಂದಿಗಳು ಹಾಗೂ ಪೋಷಕ ಮತ್ತು ಶಿಕ್ಷಕ ಕಮಿಟಿಯ ಸದಸ್ಯರುಗಳು ಉಪಸ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!