

ನಾಗರಹೊಳೆ ಜ.21: ನಕ್ಸಲ್ ನಿಗ್ರಹದಳ ಕುಟ್ಟ, ಮಕ್ಕಳ ವಿಶೇಷ ಪೊಲೀಸ್ ಘಟಕ, ಅಕ್ಕಪಡೆ, ಕುಟ್ಟ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ನಾಣಚ್ಚಿ ಹಾಡಿ, ನಾಗರಹೊಳೆ ಬಾಳೆ ಕೋವು ಹಾಡಿ, ಸಿಂಕೋನ ಕಾಲೋನಿ ಹಾಡಿ ಶಾಲೆ ಮಕ್ಕಳಿಗೆ ಮತ್ತು ಪೋಷಕರಿಗೆ ಪೋಕ್ಸೋ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಮುಂತಾದ ವಿಷಯಗಳ ಕುರಿತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.




