ವಿರಾಜಪೇಟೆ ಜ.14: ಕೊಡಗು ಸುನ್ನಿ ವೆಲ್ವೇರ್ ಅಸೋಸಿಯೇಷನ್ ಯುಎಇ (KSWA) ಇದರ ಈ ಬೆಳ್ಳಿ ಹಬ್ಬದ ಅಂಗವಾಗಿ ಯುಎಇ ರಾಷ್ಟ್ರದ ಶಾರ್ಜಾ ದಲ್ಲಿ ಫೆ.08 ರಂದು ನಡೆಯಲಿರುವ “ಕನೆಕ್ಟ್ ಕೊಡಗು 2026” ಕಾರ್ಯಕ್ರಮಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎಎಸ್ ಪೊನ್ನಣ್ಣ ರವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ
ಯುಎಇ (KSWA) ವಿದೇಶದಲ್ಲಿರುವ ಕೊಡಗು ಮೂಲದ ಸುನ್ನಿ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಕಳೆದ 25 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕನೆಕ್ಟ್ ಕೊಡಗು 2026 ಕಾರ್ಯಕ್ರಮದ ಮೂಲಕ ಕೊಡಗಿನ ಸಂಸ್ಕೃತಿ, ಏಕತೆ ಮತ್ತು ಭವಿಷ್ಯದ ದಿಕ್ಕುಗಳನ್ನು ಸಂಪರ್ಕಿಸುವ ವಿಶೇಷ ವೇದಿಕೆಯಾಗಿದೆ.




