ಸುಂಟಿಕೊಪ್ಪ ಜ.10: ಸುಂಟಿಕೊಪ್ಪದ ಬಳಿ 7ನೇ ಹೊಸಕೋಟೆಯಲ್ಲಿರುವ ನೇಚರ್ ಪಾರ್ಕ್ ಹೋಂ ಸ್ಟೇ ಯಲ್ಲಿ ಕೊಡಗು ಪತ್ರಕರ್ತರ ಸಂಘದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯ ಲೋಗೋ ಅನಾವರಣಗೊಳಿಸಲಾಯಿತು.
ಇದೇ ಜನವರಿ 18 ರ ಭಾನುವಾರದಂದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣ ಜನರಲ್ ತಿಮ್ಮಯ್ಯ ಸ್ಟೇಡಿಯಂನಲ್ಲಿ ಕೊಡಗು ಪತ್ರಕತ೯ರ ಸಂಘ (ರಿ) ಹಾಗೂ ಕ್ಷೇಮಾಭಿವೖದ್ದಿ ಸಮಿತಿ ವತಿಯಿಂದ ಸಂಕ್ರಾಂತಿ ಕ್ರಿಕೆಟ್ ಹಬ್ಬವನ್ನು ಆಯೋಜಿಸಲಾಗಿದೆ
ಬೆಳಗ್ಗೆ 9 ಗಂಟೆಗೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಯಾಗಲಿದೆ , ಜಿಲ್ಲೆಯ ಪತ್ರಕರ್ತಕರಿಗಾಗಿ ಆಯೋಜಿಸಲಾಗಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ರಾಜಕಾರಣಿಗಳು, ಅಧಿಕಾರಿವಗ೯ದವರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಕ್ರಿಕೆಟ್ ಪಂದ್ಯಾಟ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.





