ಮಡಿಕೇರಿ ಜ.9 K SHIP – 4 ಯೋಜನೆಯಡಿಯಲ್ಲಿ ಮಡಿಕೇರಿ – ದೋಣಿಗಲ್ (NH 75) ರಸ್ತೆ ಅಭಿವೃದ್ಧಿಗೆ ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದು, ರಸ್ತೆ ಅಭಿವೃದ್ಧಿ ಪಡಿಸುವ ಪ್ರಕ್ರಿಯೆಗಳ ತಾಂತ್ರಿಕ ಕಾರ್ಯಗಳು ಪ್ರಾರಂಭಗೊಂಡಿದ್ದು DPR ಸಿದ್ಧಪಡಿಸುವ ನಿಟ್ಟಿನಲ್ಲಿ ಈಗಾಗಲೇ 7 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ DPR ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೆಂಗಳೂರಿನ ಶಾಸಕರ ಭವನದ ಶಾಸಕರ ಕಛೇರಿಯಲ್ಲಿ ಡಿಪಿಆರ್ (DPR) ಸಂಬಂಧಿಸಿದಂತೆ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಈ ರಸ್ತೆಯಿಂದ ಕೊಡಗಿನ ಜನತೆಗೆ ಹಾಗೂ ವಾಣಿಜ್ಯೋದ್ಯಮ, ನೂತನ ಕೈಗಾರಿಕೆಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಮಡಿಕೇರಿ ವಿಧಾನಸಭಾ ಕೇತ್ರದ ಶಾಸಕ ಡಾ.ಮಂತರ್ ಗೌಡ ರವರು ತಿಳಿಸಿದ್ದಾರೆ