Google search engine
Home♦️ಇತ್ತೀಚಿನ ಸುದ್ದಿಗಳು.ಪೊನ್ನಪ್ಪಸಂತೆಯಲ್ಲಿ ನೆಲ ಜಲ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ

ಪೊನ್ನಪ್ಪಸಂತೆಯಲ್ಲಿ ನೆಲ ಜಲ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ

ಮಾಯಮುಡಿ ಜ.6:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವಿರಾಜಪೇಟೆ  ತಾಲೂಕು ಮಾಯಮುಡಿ  ವಲಯ ಕಾರ್ಯಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ನೆಲ ಜಲ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಪೊನ್ನಪ್ಪ ಸಂತೆಯ  ಶ್ರೀ ಶಕ್ತಿ ಸಮುದಾಯ ಭವನದಲ್ಲಿ  ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಯಾದ ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಸುಬ್ಬಮ್ಮ ಟಿ ಆರ್  ರವರು ನೆಲ ಜಲ ಸಂರಕ್ಷಣೆ,  ಭೂಮಿಯೊಳಗಿನ ನೀರಿನ ಸಂಪನ್ಮೂಲಗಳನ್ನು ರಕ್ಷಿಸುವುದು ಮತ್ತು ಸುಸ್ಥಿರವಾಗಿ ಬಳಸುವುದು,  ನೀರಿನ ಮೂಲಗಳ ಪುನರ್ ಭರ್ತಿ, ನೀರಿನ ಮಾಲಿನ್ಯವನ್ನು ತಡೆಗಟ್ಟುದು ಮತ್ತು ಕಡಿಮೆ ನೀರಿನ ಬಳಕೆ, ಹಾಗೂ ಮಳೆ ನೀರು  ಸಂಗ್ರಹಣೆ ಕ್ರಮಗಳನ್ನು ತಿಳಿಸಿದರು, 

ಪೊನ್ನಪ್ಪ ಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಸಖಿಯಾದ ಪ್ರಿಯ ರವರು ಮಾತನಾಡಿ ಪಂಚಾಯತ್ ವ್ಯಾಪ್ತಿಯ ಕೃಷಿಕರಿಗೆ ಜಾಬ್ ಕಾರ್ಡ್ ಕುರಿತಾಗಿ  ಮಾಹಿತಿ ನೀಡಿದರು.

 ಈ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ವಸಂತ ಪೊನ್ನಪ್ಪ ಸಂತೆ,  ಒಕ್ಕೂಟದ ಅಧ್ಯಕ್ಷರಾದ ಸೀನಾ ಸೇವಾ ಪ್ರತಿನಿಧಿಯಾದ  ಬಿಂದು ವಿ .ಎಲ್. ಎ ಗಳಾದ ತಮಾನ ಬಾನು , ಪ್ರಗತಿಪರ ಕೃಷಿಕರು, ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!