Google search engine
Home♦️ಇತ್ತೀಚಿನ ಸುದ್ದಿಗಳು.ಯೋಗೇಶ್ ಡಿ. ಎನ್ ಹಾಗೂ ಅವರ ತಂಡದ ತರಬೇತಿಯಲ್ಲಿ ಬ್ಲಾಕ್ ಬೆಲ್ಟ್ ಒಂದನೇ ನೇ ಡಾನ್...

ಯೋಗೇಶ್ ಡಿ. ಎನ್ ಹಾಗೂ ಅವರ ತಂಡದ ತರಬೇತಿಯಲ್ಲಿ ಬ್ಲಾಕ್ ಬೆಲ್ಟ್ ಒಂದನೇ ನೇ ಡಾನ್ ಗಳಾಗಿ ಹೊರಹೊಮ್ಮಿದ ಗುಡ್ಡೆಹೊಸೂರು ಸುತ್ತಮುತ್ತಲಿನ  ಕರಾಟೆ ಕಲಿಕಾ ವಿದ್ಯಾರ್ಥಿಗಳು.

ಕುಶಾಲನಗರ ಜ.5: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ಯ  ಅಧ್ಯಕ್ಷರಾದ ಅರುಣ್ ಎನ್ ಎಸ್  ಮತ್ತು  ಉಪಾಧ್ಯಕ್ಷರಾದ ಚಂದ್ರು ರವರ ನೇತೃತ್ವದಲ್ಲಿ    ಶನಿವಾರಸಂತೆಯಲ್ಲಿ ನೆಡೆದ ಬ್ಲಾಕ್ ಬೆಲ್ಟ್ ಟೆಸ್ಟ್ ನಲ್ಲಿ  ಗುಡ್ಡೆಹೊಸೂರು ಸುತ್ತಮುತ್ತಲಿನ ಭಾಗಗಳ ಕರಾಟೆ ಕಲಿಕಾ ವಿದ್ಯಾರ್ಥಿಗಳು ಬ್ಲಾಕ್ ಬೆಲ್ಟ್ ಒಂದನೇ ನೇ ಡಾನ್ ಗಳಾಗಿ  ಹೊರಹೊಮ್ಮಿದ್ದಾರೆ.

ಬ್ಲಾಕ್ ಬೆಲ್ಟ್ ಒಂದನೇ ನೇ ಡಾನ್ ಗಳಾಗಿ ಕ್ರಮವಾಗಿ ಗುಡ್ಡೆಹೊಸೂರಿನ, ಧನಲಕ್ಷ್ಮಿ, ಡಿವಿನ್,ಅಕಿಲ್,ಭುವನ್, ಶ್ರೇಯನ್, ಹಾರಂಗಿಯ ಸೂರ್ಯ, ಆದರ್ಶ್ಗುಮ್ಮನಕೊಲ್ಲಿಯ ಧನ್ವಿನ್, ಸಮರ್ಥ್, ಹಿತೇಶ್ ಕುಮಾರ್, ದೊಡ್ಡತ್ತೂರಿನ ಕಿಶೋರ್  ಅವರುಗಳು ಹೊರಹೊಮ್ಮಿದ್ದಾರೆ.

ಇವರುಗಳಿಗೆ ಸ್ವತಹ ಬ್ಲಾಕ್ ಬೆಲ್ಟ್ ಮೂರನೇ  ಡಾನ್ ಆಗಿರುವ ದೊಡ್ಡತ್ತೂರಿನ ಯೋಗೇಶ್ ಡಿ ಎನ್ ಹಾಗೂ ಮೋನಿಶ್ ಎನ್  ಮತ್ತು ಮೋನಿಕಾ ಎನ್  ರವರು   ತರಬೇತಿಯನ್ನು ನೀಡುತ್ತಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!