ವಿರಾಜಪೇಟೆ ಡಿ.31: ಪೊನ್ನಂಪೇಟೆ ವಲಯದ ಅರುವತೋಕ್ಲು ಕಾರ್ಯ ಕ್ಷೇತ್ರದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಟ್ಯೂಷನ್ ಕ್ಲಾಸ್ ಉದ್ಗಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಪ್ರಭಾರ ಮುಖ್ಯಪಾದ್ಯಾಯರಾದ ರೇವತಿರವರು ಜ್ಯೊತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು ಶಿಕ್ಷಕರಿಂದ ಅನೇಕ ಕಾರ್ಯಕ್ರಮಗಳ ಅನುಷ್ಠಾನಗಳು ನಡೆಯುತ್ತಿದ್ದು ಅದರಲ್ಲಿ ಟ್ಯೂಷನ್ ಕ್ಲಾಸ್ ಕೂಡ ಒಂದಾಗಿದ್ದು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಸಂತೋಷದ ವಿಷಯವಾಗಿದೆ ಹಾಗೆಯೇ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆದ್ದು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಕುರಿತು ವಲಯ ಮೇಲ್ವಿಚಾರಕರಾದ ನಾಗರಾಜ್ ರವರು ವಿದ್ಯಾರ್ಥಿಗಳಿಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ , ಶಿಷ್ಯವೇತನ, ಶಾಲೆಗಳಿಗೆ ಸಲಕರಣೆ ನೀಡುವುದರ ಬಗ್ಗೆ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾದಿಕಾರಿ ಉಷಾರಾಣಿ ಹಾಗೂ ಸೇವಾ ಪ್ರತಿನಿಧಿಯಾದ ಗೌರಿ, ಭವಾನಿ, ಸಹಶಿಕ್ಷರರಾದ ಚಂದನ, ವಿದ್ಯಾ,ಸುಮಿ, ಯಡ್ಲಿಸ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.






