Google search engine
Home♦️ಇತ್ತೀಚಿನ ಸುದ್ದಿಗಳು.ದುಬಾರೆ ಪ್ರವಾಸಿ ತಾಣಕ್ಕೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು,   ವಾಹನ ದಟ್ಟಣೆಯಿಂದ ಕಿಲೋಮಿಟರ್ ತನಕ...

ದುಬಾರೆ ಪ್ರವಾಸಿ ತಾಣಕ್ಕೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು,   ವಾಹನ ದಟ್ಟಣೆಯಿಂದ ಕಿಲೋಮಿಟರ್ ತನಕ ರಸ್ತೆಯಲ್ಲಿ  ನಿಧಾನ ಗತಿಯಲ್ಲಿ ಸಾಗುತ್ತಿರುವ ವಾಹನಗಳು.

ನಂಜರಾಯಪಟ್ಟಣ ಡಿ.26: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರಕ್ಕೆ ಸಾಲು ಸಾಲು ರಜೆಯ ಕಾರಣ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಾವೇರಿ ಹೊಳೆ ದಂಡೆಯಲ್ಲಿರುವ ಈ ಪ್ರವಾಸಿ ತಾಣದಲ್ಲಿ ಸಾಕಾನೆ ಶಿಬಿರ ವೀಕ್ಷಿಸಲು ಹಾಗೂ ನದಿಯಲ್ಲಿ ಬೋಟಿಂಗ್ ಮಾಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಖಾಲಿ ಖಾಲಿಯಾಗಿದ್ದ ಈ ಪ್ರವಾಸಿ ತಾಣದಲ್ಲಿ ಕ್ರಿಸ್ಮಸ್ ಹಾಗೂ ವರ್ಷಾಂತ್ಯದ ರಜೆಗಳಿಂದ ಪ್ರವಾಸಿಗರ ಆಗಮನ ಸ್ಥಳೀಯ ಹೋಟೆಲ್ ಅಂಗಡಿ  ಮುಂಗಟ್ಟುಗಳು, ಹೋಂಸ್ಟೇ ವ್ಯಾಪಾರೋದ್ಯಮಿಗಳಿಗೆ  ಹರ್ಷತಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!