
ಸುಂಟಿಕೊಪ್ಪ ಡಿ 24: ಭಕ್ತಿಯ ಸಾರಥ್ಯದಲ್ಲಿ ಸಾಗಿಬಂದ ಆದಿಯೋಗಿ ಶಿವಯಾತ್ರೆಯ ರಥಕ್ಕೆ ನಿನ್ನೆ ಸುಂಟಿಕೊಪ್ಪ ಸಮೀಪ ಗದ್ದೆಹಳ್ಳದ ಗಾಂಧಿ ವೃತ್ತದಲ್ಲಿ ಹಿಂದೂ ಭಕ್ತಾಧಿಗಳು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.
ಇಂದು ಬೆಳಗ್ಗಿನ ಪೂಜೆಯನ್ನು ಸಲ್ಲಿಸಿದ ಬಳಿಕ ರಥಯಾತ್ರೆ ಕುಶಾಲನಗರದತ್ತ ಪ್ರಯಾಣ ಬೆಳೆಸಿತು. ಶ್ರೀಪುರಂ ಅಯ್ಯಪ್ಪ ಕ್ಷೇತ್ರದ ಬಳಿ ಪೂಜೆಯನ್ನು ಸ್ವೀಕರಿಸಿದ ಬಳಿಕ ಕೊಡಗರಹಳ್ಳಿ ಶ್ರೀ.ಬೈತೂರಪ್ಪ ದೇವಾಲಯಕ್ಕೆ ಆಗಮಿಸಿತು. ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ಸ್ವಲ್ಪ ಸಮಯ ದ್ಯಾನ ಭಜನೆಯ ಮೂಲಕ ಕೊಡಗರಹಳ್ಳಿ ಮಾರುತಿ ನಗರದ ಶ್ರೀ. ಆಂಜನೇಯ ದೇವಸ್ಥಾನ 7 ನೇ ಹೊಸಕೋಟೆ ಯ ಶ್ರೀ.ಮಹಾಗಣಪತಿ ಮತ್ತು ಶ್ರೀ. ಕೃಷ್ಣ ದೇವಸ್ಥಾನ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ನಲ್ಲಿ ಮಧ್ಯಾಹ್ನ ದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭ ಆಯಾ ವ್ಯಾಪ್ತಿಯ ದೇವಸ್ಥಾನ ಸೇವಾ ಸಮಿತಿಗಳು ವಿವಿಧ ಸಂಘಟನೆಗಳು ರಥವನ್ನು ಎಳೆಯಲು ಕೈ ಜೋಡಿಸಿದ್ದು ಮಾತ್ರವಲ್ಲದೆ ಮನೆ ಮತ್ತು ವಾಣಿಜ್ಯ ಮಳಿಗೆಗಳ ಮುಂದೆ ಹಾದು ಹೋಗುವಾಗ ಈಡುಗಾಯಿ ಹೊಡೆದು ಅರತಿ ಎತ್ತಿ ಭಕ್ತಿಯಿಂದ ನಮಿಸಿದ್ದು ಕಂಡು ಬಂತು ಬುಧವಾರ ಸಂಜೆ ಕುಶಾಲನರ ತಲುಪಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ತಂಗಲಿದೆ
ಗುರುವಾರ ಬೆಳಿಗ್ಗೆ ರಥಯಾತ್ರೆಯು ಬೆಟ್ಟದಪುರ ಕೆ.ಆರ್.ನಗರ ಮಾರ್ಗವಾಗಿ ಮೈಸೂರು ತಲುಪಲಿದ್ದು, ಫೆ.13 ರಂದು ಕೊಯಮಾತ್ತೂರಿನಲ್ಲಿರುವ ಈಶ ಆದಿಯೋಗಿ ಕೇಂದ್ರದಲ್ಲಿ ಫೆ.14 ಮಹಾ ಶಿವರಾತ್ರಿಯಂದು ಸಮರ್ಪಣೆಗೊಳ್ಳಲಿದೆ.

ಭಕ್ತಿಯ ಸಾರಥ್ಯದಲ್ಲಿ ಆದಿಯೋಗಿ ರಥವು ತನ್ನ ಒಂದು ಸಾವಿರ ಕಿ.ಮೀ.ಶಿವಯಾತ್ರೆಯನ್ನು ದೇವಾಲಯಗಳ ನಗರ ಉಡುಪಿಯಿಂದ ಡಿ.7 ರಂದು ಪ್ರಾರಂಭಿಸಿದ್ದು ಸದ್ಗುರುಗಳು ಮಹಾಶಿವರಾತ್ರಿಗೆ ಶಿವಾಂಗ ಸಾಧನದ ಭಾಗವಾಗಿ ಈ ರಥಯಾತ್ರೆಯಿದ್ದು ಶಿವಾಂಗ ಸಾಧನವು ಆಂತರಿಯದಲ್ಲಿರುವ ಭಕ್ತಿಯನ್ನು ಪೊಷಿಸುವ ಆದಿಯೋಗಿಯಾದ ಶಿವನತ್ತ ಗ್ರಹಣ ಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಶಕ್ತಿಯುತ ಯೋಗ ಪ್ರಕ್ರಿಯೆಯಾಗಿದೆ.
ಆದಿಯೋಗಿ ರಥವು ಆದಿಯೋಗಿಯ ಸಾನಿಧ್ಯವನ್ನು ಕರ್ನಾಟಕ ರಾಜ್ಯದ್ಯಾಂತ ಹೊತ್ತು ಸಾಗುತ್ತಿದ್ದು, ಭೇಟಿ ನೀಡುವ ಪ್ರತಿಯೊಂದು ಊರಿನಲ್ಲಿಯೂ ಭಕ್ತಿಯೋಗಬ್ಯಾಸಗಳು ನಿವೆದನೆ ಮತ್ತು ಆರ್ಪಣೆಯ ಮನೋಬಾವನ್ನು ಹೆಚ್ಚಿಸುತ್ತದೆ ಎಂದು ಶಿವಯಾತ್ರೆಯ ಸಂಘಟಕರು ಹೇಳಿದರಲ್ಲದೆ ಕೊಡಗಿನಲ್ಲಿ ದೊರೆತ ಅಭೂತ ಪೂರ್ವ ಸ್ವಾಗತ ಭಕ್ತಿ ಮತ್ತು ಪ್ರೀತಿಯನ್ನು ಸದಾ ಸ್ಮರಿಸುವುದಾಗಿ ಹೇಳಿದರು.

ರಥ ಎಳೆಯಲು ಪುಟಾಣಿ ಮಕ್ಕಳು ಕೂಡ ಭಕ್ತಿ ಭಾವದಿಂದ ಕೈಜೋಡಿಸಿದರು.




