ವಿರಾಜಪೇಟೆ ಡಿ.22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಕಾನೂರು ವಲಯ, ವಿರಾಜಪೇಟೆ ತಾಲೂಕು ಇವರ ವತಿಯಿಂದ ಕಾನೂರಿನಲ್ಲಿ ವೀಲ್ ಚೇರ್ ಮತ್ತು ಪಿಂಚಣಿ ಕಾರ್ಡು ಹಂಚಿಕೆ ಹಾಗು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜನಮಂಗಲ ಫಲಾನುಭವಿಗಳಿಗೆ ವೀಲ್ ಚೇರನ್ನು ಪಿ ಟಿ ದೇವಿ, ಕುಂಞಿಮಾಡ ಸದಾಶಿವ ರವರು ವಿತರಿಸಿ ಶುಭ ಹಾರೈಸಿದರು, ಚಿರಿಯಪಂಡ ಈಶ ಬೆಳ್ಳಿಯಪ್ಪ ಅವರು csc ಕಾರ್ಯಕ್ರಮದಡಿ ಪಿಂಚಣಿ ಕಾರ್ಡ್ ವಿತರಣೆ ಮಾಡಿದರು
ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಡ್ಯಮಾಡ ಭರತ್ ಮಾಚು ಅವರು ನೆರವೇರಿಸಿ ಗ್ರಾಮ ಅಭಿವೃದ್ಧಿ ಯೋಜನೆ ಹಾಗೂ ಡಾ| ಡಿ ವೀರೇಂದ್ರ ಹೆಗಡೆಯವರು ಮಾಡುತ್ತಿರುವ ಉತ್ತಮ ಕಾರ್ಯಕ್ರಮ ಗಳಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು ಮಾಚಿಮಾಡ ರವೀಂದ್ರರವರು ಸತ್ಯನಾರಾಯಣ ಪೂಜೆಯ ಮಹತ್ವ ಕುರಿತು ಮಾತುಗಳನ್ನಾಡಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಲೀಲಾವತಿ ನಿರ್ದೇಶಕರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಇವರು ಗ್ರಾಮ ಅಭಿವೃದ್ಧಿ ಯೋಜನೆ ಪ್ರಾರಂಭವಾದ ಉದ್ದೇಶ ಹಾಗೂ ಗ್ರಾಮ ಅಭಿವೃದ್ಧಿ ಯೋಜನೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಹಾಗೂ ಒಂದು ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಪುಷ್ಪ ಕೆ ಆರ್ ರವರು ಸತ್ಯನಾರಾಯಣ ಪೂಜೆಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು ಕಾರ್ಯಕ್ರಮದಲ್ಲಿ ಒಟ್ಟೆಮಾಡ ಮಿಥುನ್ ಮಾದಪ್ಪ, ಕಾಡ್ಯಮಾಡ ಬೋಪಣ್ಣ, ಎಸ್ ಎಂ ಬಸಪ್ಪ, ಮಾಚಿಮಾಡ ರೂಪ ಸತೀಶ್, ಮನ್ನಕ್ಕ ಮನೆ ತಾರಾ ಜನಾರ್ದನ, ಎಂ ಟಿ ಸುನಿತಾ ಚಂದ್ರಶೇಖರ್ , ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಎಲ್ಲಾ ಸದಸ್ಯರು, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ವಲಯ ಒಕ್ಕೂಟದ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘ ಸದಸ್ಯರು ಉಪಸ್ಥಿತರಿದ್ದರು.
ವಿರಾಜಪೇಟೆ ತಾಲೂಕು ಯೋಜನಾಧಿಕಾರಿಗಳಾದ ಹರೀಶ್ ರವರು ಎಲ್ಲ ಗಣ್ಯರನ್ನು ಸ್ವಾಗತಿಸಿದರು,ಕಾರ್ಯಕ್ರಮದ ನಿರೂಪಣೆಯನ್ನು ವಲಯ ಮೇಲ್ವಿಚಾರಕರಾದ ಸುಜೀರ್ ಕುಲಾಲ್ ರವರು ನೆರವೇರಿಸಿದರು, ಬ್ರಹ್ಮಗಿರಿ ಸೇವಾ ಪ್ರತಿನಿಧಿ ಮುತ್ತಪ್ಪರವರು ವಂದನಾರ್ಪಣೆ ಮಾಡಿದರು, ಪೂಜೆ ಕಲ್ಲು ಸೇವಾ ಪ್ರತಿನಿಧಿ ಹೇಮಾವತಿಯವರು ಸಾಧನವರದಿ ಮಂಡನೆ ಮಾಡಿದರು.




