Google search engine
Home♦️ಇತ್ತೀಚಿನ ಸುದ್ದಿಗಳು.500 ಎಕರೆಯಲ್ಲಿ ನೂತನ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಲಿ,ಕುಶಾಲನಗರ ಛೇಂಬರ್ ಮಹಾಸಭೆಯಲ್ಲಿ ಟಿ.ಪಿ.ರಮೇಶ್ ಸಲಹೆ..

500 ಎಕರೆಯಲ್ಲಿ ನೂತನ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಲಿ,ಕುಶಾಲನಗರ ಛೇಂಬರ್ ಮಹಾಸಭೆಯಲ್ಲಿ ಟಿ.ಪಿ.ರಮೇಶ್ ಸಲಹೆ..

ಕುಶಾಲನಗರ ಡಿ 22: ಕುಶಾಲನಗರ ತಾಲೂಕಿನ ಹೆಬ್ಬಾಲೆ ಸಮೀಪದಲ್ಲಿ ಸರ್ಕಾರಿ ಜಾಗವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ಕುಶಾಲನಗರ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಕೊಡಗು  ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಸ್ಥಾಪಕ ಕಾರ್ಯದರ್ಶಿ  ಟಿ.ಪಿ.ರಮೇಶ್ ಸಲಹೆ ನೀಡಿದರು.ಆ ಮೂಲಕ ಹೆಚ್ಚು ಹೆಚ್ಚು ಕೈಗಾರಿಕೆಗಳನ್ನು ಸೆಳೆಯುವ ಕೆಲಸಗಳಾಗಬೇಕಿದೆ ಎಂದರು.

ಕುಶಾಲನಗರದ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್  ವತಿಯಿಂದ ಪಾಲ್ಯಂಸ್ ಎಮರಾಲ್ಡ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿರುವ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ತೆರೆಯಲು ಸ್ಥಳವೇ ಇಲ್ಲದ ಕಾರಣ ಸರ್ಕಾರ  ಹೆಬ್ಬಾಲೆ ವ್ಯಾಪ್ತಿಯಲ್ಲಿ ಕನಿಷ್ಠ 500 ಎಕರೆಯಲ್ಲಿ ಎರಡನೇ ಹಂತದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕಾದ ತುರ್ತು ಆನಿವಾರ್ಯವಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳು ತೆರೆದಷ್ಟು ನಿರುದ್ಯೋಗ ಕಡಿಮೆಯಾಗುತ್ತದೆ ಎಂದರು.

ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲಾ ಸಮಿತಿಯಿಂದ ಕೈಗೊಂಡ  ಹಲವು ಕಾರ್ಯಕ್ರಮಗಳ ಬಗ್ಗೆ  ಸಭೆಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಸಮಿತಿಯ ಮಹತ್ವಾಕಾಂಕ್ಷೆಯ ಬಿಯಾಂಡ್ ಬೆಂಗಳೂರು ಯೋಜನೆಯಡಿ ಮಾಹಿತಿ ಹಾಗೂ  ತಂತ್ರಜ್ಞಾನ ಕೇಂದ್ರವನ್ನು ಕೊಡಗಿನಲ್ಲಿ ತೆರೆಯಬೇಕಿದೆ.ಜಿಲ್ಲೆಯಲ್ಲಿ 18 ಸ್ಥಾನೀಯ ಸಮಿತಿಗಳಿದ್ದು, ಈ ಪೈಕಿ 13 ಘಟಕಗಳು ಕ್ರಿಯಾಶೀಲವಾಗಿವೆ. ಉಳಿದ ಘಟಕಗಳು ಸಕ್ರಿಯವಾಗಬೇಕಿದೆ ಎಂದು ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದರು.

ಕುಶಾಲನಗರ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಬಹಳ ದೊಡ್ಡ ಯೋಜನೆಗಳ ಗುರಿ ಇದೆ. ಸದಸ್ಯರ ಸಹಕಾರ ಮುಖ್ಯ. ಹಾಗಾಗಿ ಸಂಘದ  ವ್ಯಾಪ್ತಿಯನ್ನು  ವಿಸ್ತರಿಸುವ  ಮೂಲಕ ಎಲ್ಲರ ವಿಶ್ವಾಸ ಗಳಿಸಬೇಕಿದೆ. ಕೊಡಗಿನ ಪ್ರವೇಶ ದ್ವಾರ ಕುಶಾಲನಗರದಲ್ಲಿ ಸ್ವಾಗತ ಕಮಾನು  ಮತ್ತು ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಕೇಂದ್ರವನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ತುರ್ತಾಗಿ ತೆರೆಯಬೇಕಿದೆ.   ಕುಶಾಲನಗರದ ಕಾವೇರಿ ಸೇತುವೆಗೆ ಗುಂಡೂರಾವ್ ಹೆಸರು ನಾಮಕರಣ ಮಾಡಬೇಕಿದೆ. ಹಾಗೆಯೇ ವರ್ತಕರ ಸಂಘದಿಂದ ಸ್ವಂತ ಭವನ ನಿರ್ಮಾಣ ಮಾಡಲು ಯೋಜಿಸಿದ್ದು ಎಲ್ಲರೂ ಕೈ ಜೋಡಿಸಬೇಕು ಎಂದರು. ಉದ್ಯಮೇದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಬೇರೆ ಬೇರೆ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಕಾರ್ಯಗಾರ ಮಾಡಿಸುವ ಚಿಂತನೆಯಿದೆ ಎಂದರು.

ಈ ಎಲ್ಲ ವಿಚಾರಗಳನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರಿಗೂ ಮನವರಿಕೆ ಮಾಡಿಕೊಡಲು ಸ್ಥಳೀಯ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಟಿ.ಆರ್.ಶರವಣಕುಮಾರ್ ಮಾತನಾಡಿ, ಹಿಂದಿನ ಸಾಲಿನಲ್ಲಿ ಸಂಸ್ಥೆಗಾಗಿ ದುಡಿದವರನ್ನು ಗುರುತಿಸಿ, ಈಗಿನ ಪೀಳಿಗೆಗೆ ತಿಳಿಸುವ ಸಂಪ್ರದಾಯವನ್ನು ನಾಗೇಶ್ ಮತ್ತು ಅವರ ತಂಡ ಬಹಳ ಅಚ್ಚುಕಟ್ಟಾಗಿ ಮಾಡಿದೆ ಎಂದು ಪ್ರಶಂಸಿದರು. ಮುಂದಿನ ಮಹಾಸಭೆಗೆ ಎಲ್ಲ ವರ್ತಕರು ಕಡ್ಡಾಯವಾಗಿ ಹಾಜರಾಗಬೇಕು. ಆ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು.

ಕುಶಾಲನಗರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಪಿ.ಸತ್ಯನಾರಾಯಣ, ಸ್ಥಾಪಕ ಕಾರ್ಯದರ್ಶಿ ಬಿ.ಜಿ.ಅನಂತಶಯನ, ಮಾಜಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಮಾಜಿ ಕಾರ್ಯದರ್ಶಿ ಕೆ.ಎಸ್.ವೆಂಕಟರಮಣ ರಾವ್, ಕೆ.ಎಸ್.ರಾಜಶೇಖರ್, ಕೆ.ಜೆ.ಸತೀಶ್, ಎಸ್.ಕೆ.ಸತೀಶ್, ಬಿ.ಅಮೃತರಾಜು, ಕೆ.ಆರ್.ರವಿಕುಮಾರ್, ಟಿ.ಆರ್.ಶ್ರವಣಕುಮಾರ, ರವೀಂದ್ರ ರೈ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಮಹಾಸಭೆಯಲ್ಲಿ ಕಾರ್ಯದರ್ಶಿ ಚಿತ್ರ ರಮೇಶ್, ಉಪಾಧ್ಯಕ್ಷ ಎಂ.ಡಿ. ರಂಗಸ್ವಾಮಿ, ನಿರ್ದೇಶಕರಾದ ಹೆಚ್.ಎಂ.ಚಂದ್ರು, ಮಹೇಂದ್ರ ಶರ್ಮಾ, ಓಂಪುರಿ, ಕೆ.ಎನ್.ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!