Google search engine
Home♦️ಇತ್ತೀಚಿನ ಸುದ್ದಿಗಳು.ಅತಿ ಶೀಘ್ರದಲ್ಲೇ ಲೋಕಾರ್ಪಣೆಗೆ ಅಣಿಯಾಗುತ್ತಿರುವ ಶನಿವಾರಸಂತೆ  ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.

ಅತಿ ಶೀಘ್ರದಲ್ಲೇ ಲೋಕಾರ್ಪಣೆಗೆ ಅಣಿಯಾಗುತ್ತಿರುವ ಶನಿವಾರಸಂತೆ  ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.

ಡಿ.22: ಶನಿವಾರಸಂತೆಯ  ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಯು ಡಾ.ಮಂತರ್ ಗೌಡ ರವರ ಅಭಿವೃದ್ಧಿ ಪರ ಕಾಳಜಿಯ  ಕಾರ್ಯವೈಕರಿಯಿಂದ  ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿದ್ದು, ಅತಿ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿ ನಿಂತಿದೆ.

ಶನಿವಾರಸಂತೆಯ ಜನತೆಯ ದಶಕಗಳ ಬೇಡಿಕೆಯಾಗಿದ್ದ  ಈ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಸುಮಾರು 14 ತಿಂಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಹಾಗೂ  ಶಾಸಕ ಡಾ.ಮಂತರ್‌ಗೌಡ ರವರ ಸಮ್ಮುಖದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸಿದ್ದರು.

ಹಾಗೆಯೇ ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಮಾತ್ರವೇ ಕೆಎಸ್‌ಆರ್‌ಟಿಸಿ ಬಸ್‌ ಘಟಕವಿದ್ದು, ಮತ್ತೊಂದು ಬಸ್‌ ಘಟಕ ಕುಶಾಲನಗರ ಸಮೀಪ ಬಸವನಹಳ್ಳಿ ಬಳಿ ನಿರ್ಮಾಣವಾಗುತ್ತಿದೆ.  ಆದ್ದರಿಂದ ಕೊಡಗು ಜಿಲ್ಲೆಗೆ ಸೀಮಿತವಾಗಿ ಒಂದು ಪ್ರತ್ಯೇಕ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಸ್ಥಾಪನೆಯ ಬೇಡಿಕೆ ಕುರಿತು ಬಹಳ ಕಾಲದಿಂದಲೂ ಸಾರ್ವಜನಿಕ ವಲಯದಲ್ಲಿ ಚರ್ಚಿಸಲ್ಪಡುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!