Google search engine
Home♦️ ಶಿಕ್ಷಣ ,ಆರೋಗ್ಯ,, ಗ್ರಾಮ ಪಂಚಾಯತಿಮಕ್ಕಳ ಸ್ವಾಸ್ತ್ರದ ದೃಷ್ಟಿಯಿಂದ ಎಲ್ಲಾ ಪೋಷಕರು 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು...

ಮಕ್ಕಳ ಸ್ವಾಸ್ತ್ರದ ದೃಷ್ಟಿಯಿಂದ ಎಲ್ಲಾ ಪೋಷಕರು 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಶಾಸಕರಾದ ಪೊನ್ನಣ್ಣ ಮನವಿ.

“ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು” ಕಾರ್ಯಕ್ರಮದ ಭಾಗವಾಗಿ  ವಿರಾಜಪೇಟೆ ಹಾಗೂ ಗೋಣಿಕೊಪ್ಪದ ಅರೋಗ್ಯ ಕೇಂದ್ರಗಳಲ್ಲಿ ಆಯೋಜನೆಗೊಂಡ   ಸರಕಾರದ ಮಹತ್ವಾಕಾಂಕ್ಷೆಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ  ಭಾಗಿಯಾಗಿದ್ದರು.

ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕಿ ಮಾತನಾಡಿದ ಅವರು ಮಕ್ಕಳ ಸ್ವಾಸ್ತ್ರದ ದೃಷ್ಟಿಯಿಂದ ಡಿಸೆಂಬರ್ 21 ರಿಂದ 24ರ ವರೆಗೆ ನಡೆಯುವ ಅಭಿಯಾನದಲ್ಲಿ ಎಲ್ಲಾ ಪೋಷಕರು 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕೆಂದು  ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!