Google search engine
Home♦️ ಓದುಗರ ಪತ್ರ ಹಾಗೂ ಲೇಖನಗಳುರಾತ್ರಿಯ ವೇಳೆ  ಸಾಮಾನ್ಯ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು, ಮಡಿಕೇರಿ ಹಾಗೂ ಪುತ್ತೂರಿನ KSRTC ಮೇಲಧಿಕಾರಿಗಳಲ್ಲಿ...

ರಾತ್ರಿಯ ವೇಳೆ  ಸಾಮಾನ್ಯ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು, ಮಡಿಕೇರಿ ಹಾಗೂ ಪುತ್ತೂರಿನ KSRTC ಮೇಲಧಿಕಾರಿಗಳಲ್ಲಿ ಒಂದು ಮನವಿ ಪತ್ರ

✍️✍️ ಚೆಂಗಪ್ಪ ಚರಣ್ ಬೀರುನಾಣೆ

ರಾತ್ರಿ ವೇಳೆ  ಸಾಮಾನ್ಯ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು, ಮಡಿಕೇರಿ ಹಾಗೂ ಪುತ್ತೂರಿನ KSRTC ಮೇಲಧಿಕಾರಿಗಳಲ್ಲಿ ಒಂದು ಮನವಿ ಪತ್ರ

ಮಡಿಕೇರಿ, ಪುತ್ತೂರಿನ KSRTC ಮೇಲಧಿಕಾರಿಗಳಲ್ಲಿ ಒಂದು ಮನವಿ, ವಿರಾಜಪೇಟೆಯಿಂದ, ಮೈಸೂರು, ಬೆಂಗಳೂರಿಗೆ ಸಂಜೆ ಮತ್ತು ರಾತ್ರಿಯ ವೇಳೆ ಸಾಮಾನ್ಯ ಸಾರಿಗೆ ಬಸ್ ಗಳನ್ನು ಬಿಡಬೇಕಾಗಿ ವಿನಂತಿ,

 ಸದ್ಯದ ಪರಿಸ್ಥಿತಿಯಲ್ಲಿ ರಾತ್ರಿಯ ವೇಳೆ 2 ರಾಜಹಂಸ, 1 ಐರಾವತ, 1 ಎಲೆಟ್ರಿಕ್ ಬಸ್ ಮುಂಗಡ ಬಸ್ ಬುಕಿಂಗ್ ನಲ್ಲಿ ಲಭ್ಯ ವಿದೆ, (ಕಣ್ಣೂರು,ತಲಶೇರಿ, ಎರ್ನಾಕುಳಂ ಬಸ್ ಗಳನ್ನು ಹೊರತು ಪಡಿಸಿ) ಆದರೇ ಒಂದೇ ಒಂದು ಸಾಮಾನ್ಯ ಸಾರಿಗೆ ಬಸ್ ಕೂಡ ರಾತ್ರಿಯ ವೇಳೆ ಮುಂಗಡ ಬುಕಿಂಗ್ ನಲ್ಲಿ ಲಭ್ಯವಿಲ್ಲ.

 ಇದರಿಂದ ಪ್ರಯಾಣಿಕರಿಗೆ ತುಂಬಾನೇ ಅನಾನುಕೂಲ ಆಗುತ್ತಿದೆ, ಈಗ ಮದುವೆ, ಇನ್ನಿತರ ಶುಭ ಸಮಾರಂಭ ವಿರುವುದರಿಂದ ಕೊಡಗಿಗೆ ಪ್ರಯಾಣಿಕರ ಸಂಖ್ಯೆಯೂ ಕೂಡ ಅಧಿಕವಾಗಿದೆ, ಬಸ್ ಮತ್ತು ಬಸ್ ಸೀಟ್ ದೊರೆಯುವುದೇ ಈಗೀಗ ದೊಡ್ಡ ತಲೆ ನೋವಾಗಿದೆ, ಹಿರಿಯ ನಾಗರಿಕರು, ಚಿಕ್ಕ ಮಕ್ಕಳಿಗೆ ಇನ್ನೂ ಕಷ್ಟ, ಅದರಲ್ಲೂ ಗೋಣಿಕೊಪ್ಪ ದಲ್ಲಿ ದುಸ್ತರ ವಾಗಿದೆ, ಆದರಿಂದ ಸಂಜೆ 6 ಗಂಟೆ ಹಾಗು ರಾತ್ರಿ 10.30 ಸಾಮಾನ್ಯ ಸಾರಿಗೆ ಬಸ್ ಗಳನ್ನು  ವಿರಾಜಪೇಟೆಯಿಂದ ಬೆಂಗಳೂರಿಗೆ  ಬಿಡಬೇಕಾಗಿ ವಿನಂತಿ, ಹಾಗೆಯೇ ಈ ಬಸ್ ಗಳನ್ನು ಮುಂಗಡ ಬುಕಿಂಗ್ ಇರಿಸಿದರೆ. ಪ್ರಯಾಣಿಕರಿಗೆ ಬಹು ಉಪಯೋಗ ಆಗುತ್ತದೆ.

ಹಾಗೆಯೇ ಕೊಣನ ಕಟ್ಟೆ, ಮಾಯಮುಡಿ ಕಡೆಯಿಂದ ಹಲವರು ತುರ್ತು ಸಂದರ್ಭದಲ್ಲಿ ಮೈಸೂರ್ ಅಥವಾ ಬೆಂಗಳೂರಿಗೆ ಹೋಗಬೇಕಾದ್ರೆ chennanngollii ಯಲ್ಲಿ ಒಂದು ಕೋರಿಕೆ ನಿಲುಗಡೆ ಮಾಡಿಸಿ ಕೊಡಬೇಕಾಗಿ ಸಾರ್ವಜನಿಕರು  ಪ್ರಯಾಣಿಕರು ಹಾಗೂ ಗ್ರಾಮಸ್ಥರ ಪರವಾಗಿ ಕಳಕಳಿಯಿಂದ ವಿನಂತಿಸಿ ಕೊಳ್ಳುತ್ತಿದ್ದೇನೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!