
ಉಚಿತ ಕಂಪ್ಯೂಟರ್ ತರಬೇತಿಗೆ ಕೂಡಿಗೆಯ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ (RSETI) ವತಿಯಿಂದ ಅರ್ಜಿ ಆಹ್ವಾನ
ಕೂಡಿಗೆ: ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಜಿಲ್ಲಾ ಪಂಚಾಯತ್ ಕೊಡಗು ಕರ್ನಾಟಕ ಸರಕಾರದ ಪ್ರಾಯೋಜಕತ್ವದಲ್ಲಿ 45 ದಿನಗಳ ಉಚಿತ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಉಚಿತ ತರಬೇತಿಯು 05-01-2026 ರಿಂದ 18-02-2026 ವರಗೆ ಕೂಡಿಗೆಯ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ (RSETI) ಸಂಸ್ಥೆಯಲ್ಲಿ ನಡೆಯಲಿದ್ದು. 18 ರಿಂದ 45 ವರ್ಷಗಳ ವಯೋಮಿತಿಯ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿಯಲ್ಲಿ Graphic Design DTP, Adobe Page maker, Corel drawLogo, Brochure, Pamphlet , Banner, Visiting Card,Invitations, Cover page ಮುಂತಾದ ವಿಷಯಗಳ ಕುರಿತು ಕಲಿಯಬಹುದಾಗಿದೆ.
ತರಬೇತಿ ವೇಳೆ ಉಚಿತ ಊಟ ಹಾಗೂ ವಸತಿಯ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆಮಾಡಲು ಕೋರಲಾಗಿದೆ. ವಿ.ಸೂ : ಪೊನ್ ಕರೆ ಮಾಡುವ ಸಮಯ ಬೆಳಿಗ್ಗೆ : 9030 ರಿಂದ ಸಂಜೆ 5:30 ರ ವರೆಗೆ 9686406181, 8618471801, 9900142602, 9449402081




