Google search engine
Home♦️ಇತ್ತೀಚಿನ ಸುದ್ದಿಗಳು.77ನೇ ಗಣರಾಜ್ಯೋತ್ಸವದ ರಾಜ್ಯಪಾಲರ ಗೌರವ ರಕ್ಷೆ ಪೆರೇಡ್ ನಲ್ಲಿ ರಾಷ್ಟ್ರೀಯ ಸೇವಾದಳವನ್ನು ಪ್ರತಿನಿಧಿಸಿದ  ಕೊಡಗಿನ ತಾನ್ಯ...

77ನೇ ಗಣರಾಜ್ಯೋತ್ಸವದ ರಾಜ್ಯಪಾಲರ ಗೌರವ ರಕ್ಷೆ ಪೆರೇಡ್ ನಲ್ಲಿ ರಾಷ್ಟ್ರೀಯ ಸೇವಾದಳವನ್ನು ಪ್ರತಿನಿಧಿಸಿದ  ಕೊಡಗಿನ ತಾನ್ಯ ಮುರಳಿ

ಮಡಿಕೇರಿ ಜ.26: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ಷ ಪೆರೇಡ್ ಮೈದಾನದಲ್ಲಿ  ಇಂದು ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾ ವರ್ ಚಂದ್  ಗೇಹಲೊಟ್ ಅವರಿಗೆ ಗೌರವ ರಕ್ಷೆ ನೀಡಿದ ಸಂಧರ್ಭ ಆಯೋಜಿಸಿದ್ದ ಪೆರೇಡ್ ನಲ್ಲಿ ತಾನ್ಯ ಮುರಳಿ ಅವರು ರಾಜ್ಯ ರಾಷ್ಟ್ರಿಯ ಸೇವಾದಳ ತಂಡದಲ್ಲಿ ಪಾಲ್ಗೊಂಡು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುವುದರೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 

ರಾಷ್ಟೀಯ  ಸೇವಾದಳವು (ಕರ್ನಾಟಕ ರಾಜ್ಯ ಘಟಕ) ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ಶಿಸ್ತು, ನೈತಿಕತೆ ಮತ್ತು ಸೇವಾ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಸಂಸ್ಥೆಯಾಗಿದೆ. ಇದು ಗಾಂಧೀಜಿಯವರ ತತ್ವಗಳ ಆಧಾರದ ಮೇಲೆ ಕವಾಯತು, ಯೋಗಾಸನ, ಮತ್ತು ದೇಶಭಕ್ತಿ ಗೀತೆಗಳ ಮೂಲಕ  ಶಾಲಾ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಶ್ರಮಿಸುತ್ತಿದೆ. 

ತಾನ್ಯ ಮುರಳಿ ಅವರು  ಸೋಮವಾರಪೇಟೆಯ ಹಿರಿಯ ಪತ್ರಕರ್ತರಾದ ಮುರಳೀಧರ ಅವರ ಸುಪುತ್ರಿಯಾಗಿದ್ದು ,  ಬಿ ಎಸ್ ಸಿ ಫಾರೆಸ್ಟ್ ಸೈನ್ಸ್  ವಿಷಯದ ಕುರಿತು ವ್ಯಾಸಂಗ ಮಾಡುತ್ತಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!