Google search engine
Home♦️ಇತ್ತೀಚಿನ ಸುದ್ದಿಗಳು.✍️✍️✍️✍️✍️✍️✍️ಗೊರೂರು ಅನಂತರಾಜು, ಹಾಸನ. ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3 ನೇ ಕ್ರಾಸ್, ಹಾಸನ...

✍️✍️✍️✍️✍️✍️✍️ಗೊರೂರು ಅನಂತರಾಜು, ಹಾಸನ. ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3 ನೇ ಕ್ರಾಸ್, ಹಾಸನ – 573 201 ☎️9449462879

ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಎಲ್ಲಾ 176 ವಚನಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಹಾಡಿಸಿ ಭಾವಾಥ೯ ಸಹಿತ ದೃಶ್ಯಿಕರಿಸಿ ಯೂ ಟ್ಯೂಬ್ ನಲ್ಲಿ ಹಾಕಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.

ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿಯವರ ತಂದೆ ಶೇಷಾದ್ರಿ ಮತ್ತು ತಾಯಿ ಕಮಲಮ್ಮನವರು. ಇವರು ಬೆಂಗಳೂರಿನ ನಿವಾಸಿಗಳಾಗಿದ್ದು,  ಪತಿ ಅರುಣ್ ಕುಮಾರ್ ರವರು ಇಂಜಿನಿಯರಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಆಕಾಶ್, ಮಹೇಶ್, ಸೊಸೆ ಐಶ್ವರ್ಯ, ಸ್ನಾತಕೋತ್ತರ ಪದವಿ ಮುಗಿಸಿ, ಮೊಮ್ಮಗ ಆವಿಯನ್ ಅಮೇರಿಕದಲ್ಲಿ ನೆಲಿಸಿದ್ದಾರೆ. ಇವರು ಸಮಾಜದ ಕಳಕಳಿಯುಳ್ಳವರಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜದ ಏಳಿಗೆಯ ಸದುದ್ದೇಶದಿಂದ ದೇವಾಂಗ ಇತಿಹಾಸವನ್ನು ಸಂಗ್ರಹಿಸಿ, ತಾವೇ ನಿರ್ಮಿಸಿದ ಗೋಸಿ ಯೂನಿವರ್ಸ ( Gosi Universe ) ಎಂಬ ಅಂತರ್ಜಾಲ ತಾಣದಿಂದ (Website) ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ದೇವಲ ಮಹರ್ಷಿ ಹಾಗು ದಾಸಿಮಯ್ಯನವರ ಜೀವನ ಚರಿತ್ರೆಯನ್ನು ವಿಕಿಪೀಡಿಯದಲ್ಲಿ ದಾಖಲಿಸಿದ್ದಾರೆ. 

ವಚನ ಸಾಹಿತ್ಯಕ್ಕೆ ಭದ್ರಬುನಾದಿಯನ್ನು ಹಾಕಿ ಬಸವಾದಿ ಪ್ರಮಥರಿಗೆ ಮಾರ್ಗದರ್ಶನ ಮಾಡಿದ ಆದ್ಯ ವಚನಕಾರ, ವಚನ ಬ್ರಹ್ಮ , ಶ್ರೀ ದೇವರ ದಾಸಿಮಯ್ಯನವರು ರಚಿಸಿರುವ ಎಲ್ಲಾ 176 ವಚನಗಳನ್ನು ರಾಗ ಸಂಯೋಜನೆ ಮಾಡಿಸಿ, ಮೊಟ್ಟಮೊದಲ ಬಾರಿಗೆ “ವಚನ ಬ್ರಹ್ಮನ ವಚನಾಮೃತ” ಎಂಬ ನಾಮದಿಂದ, ವಚನ, ಗಾಯನ, ಮತ್ತು ಭಾವಾರ್ಥ ಸಹಿತ ದೃಶ್ಯೀಕರಿಸಿ, ಸಾಹಿತ್ಯ ಲೋಕ ಹಾಗೂ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ನಿರ್ಮಿಸಿದ ಈ ಮಹತ್ಕಾರ್ಯವನ್ನು ಗುರುತಿಸಿ  ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವರು  ದಾಖಲಿಸಿ ಸನ್ಮಾನಿಸಿದ್ದಾರೆ.

ಇದರ ಸಂಪೂರ್ಣ ನಿರ್ದೇಶನ  ಹಾಗೂ ನಿರ್ಮಾಣವನ್ನು, ಅವರ ಕುಟುಂಬದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಿ.ಈ ಎಲ್ಲಾ ವಚನಗಳನ್ನು ನಿರಂತರವಾಗಿ ವೀಕ್ಷಿಸಲು, Gosi Universe, You tube Channel ನಲ್ಲಿ ಪ್ರಸಾರ ಮಾಡಿರುತ್ತಾರೆ. ಹಾಗು ಮೊಟ್ಟ ಮೊದಲ ಬಾರಿಗೆ ದಾಸಿಮಯ್ಯ ವಚನಗಳನ್ನು, ದೂರದರ್ಶನ ಚಂದನ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಿಸಿರುತ್ತಾರೆ. ಇವರ ಈ ಮಹತ್ಕಾರ್ಯವನ್ನು ಗುರುತಿಸಿ ಹಲವಾರು  ಸಂಘ – ಸಂಸ್ಥೆಗಳು ಪ್ರಶಸ್ತಿ  ಸನ್ಮಾನಗಳನ್ನು ನೀಡಿ ಗೌರವಿಸಿವೆ.  

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!