Google search engine
Home♦️ ಓದುಗರ ಪತ್ರ ಹಾಗೂ ಲೇಖನಗಳು✍️✍️✍️✍️✍️ಕೆಂಜಂಗಡ ರೋಶನ್ ನಾಣಯ್ಯ ,ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತರು, ಕೊಡಗು - ಬೆಂಗಳೂರು : 9448619408

✍️✍️✍️✍️✍️ಕೆಂಜಂಗಡ ರೋಶನ್ ನಾಣಯ್ಯ ,ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತರು, ಕೊಡಗು – ಬೆಂಗಳೂರು : 9448619408

ವಿಶೇಷ ಧನ್ಯವಾದ ಸಮರ್ಪಣಾ ಪತ್ರ

ಶ್ರೀಮಾನ್ ಮಹೇಶ್ ಕುಮಾರ್ ರವರಿಗೆಡಿ.ವೈ.ಎಸ್.ಪಿ, ವಿರಾಜಪೇಟೆ ಉಪವಿಭಾಗ ದಕ್ಷಿಣ ಕೊಡಗು:

ಮಾನ್ಯರೇ:

ವಿರಾಜಪೇಟಿ ಗೋಣಿಕೊಪ್ಪ ರಸ್ತೆಯಲ್ಲಿ ಬರುವ ಅಂಬಟ್ಟಿ ಇಳಿಜಾರಿನ ಕಣ್ಣನ್ ಟಿಯರ್ ತಿರುವಿನಿಂದ ಕೂರ್ಗ್ ಎತ್ ನಿಕ್ (ಆರ್ ಕೆ.ಎಫ್) ಕಲ್ಯಾಣ ಮಂಟವ ಮತ್ತು ಬುಂಡ್ಮಿಗಾಲ ಗ್ರಾಮ ಪಂಚಾಯಿತಿ ಕಚೇರಿವರೆಗೆ ರಾತ್ರಿ ಮತ್ತು ಹಗಲು ಸುತ್ತಮುತ್ತಲಿನ ಕೆಲವು ಜನರ ಹಸುಗಳು ಮಾಲೀಕರು ಜೊತೆಯಲ್ಲಿ ಇಲ್ಲದೇ ರಸ್ತೆಗೆ ಅಡ್ಡಲಾಗಿ ದಾಟುತ್ತಿರುವುದರಿಂದ ವಾಹನ ಸವಾರರು ವಾಹನದ ನಿಯಂತ್ರಣ ಕಳೆದುಕೊಂಡು ಹಸುಗಳಿಗೆ ಗುದ್ದಿ ವಾಹನ ಸವಾರರು ಮತ್ತು ಹಸುಗಳ ಜೀವಕ್ಕೆ ತೊಂದರೆಯಾಗುವುದನ್ನು ಗಮನಿಸಿದ ನಾವುಗಳು ಈ ವಿಚಾರವನ್ನು ಪತ್ರ ಮುಖೇನ ವಿರಾಜಪೇಟಿ ಡಿ.ವೈ.ಎಸ್.ಪಿ. ಶ್ರೀಮಾನ್ ಮಹೇಶ್ ಕುಮಾರ್ ರವರ ಗಮನಕ್ಕೆ ತಂದಾಗ ಅವರು ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿ ಆ ಕೂಡಲೇ ತುರ್ತಾಗಿ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಗ್ರಾಂಮಾತರ ಠಾಣಾಧಿಕಾರಿಗಳಿಗೆ ಸೂಚಿಸಿ ಪೊಲೀಸ್ ಸಿಬ್ಬಂದಿ ವರ್ಗದವರನ್ನು ಹಸುಗಳನ್ನು ಬಿಡಾಡಿಯಾಗಿ ಎಲ್ಲೆಂದರಲ್ಲಿ ಬಿಡುವ ಹಸುಗಳ ಮಾಲೀಕರ ಮನೆಮನೆಗೆ ಕಳುಹಿಸಿ ನೋಟಿಸ್ ಕೊಟ್ಟು ಇನ್ನು ಮುಂದೆ ಹಸುಗಳನ್ನು ರಸ್ತೆಗೆ ಬಿಡದೆ ಎಚ್ಚರ ವಹಿಸಬೇಕಾಗಿ ತಿಳುವಳಿಕೆ ನೀಡಿ ವಾಹನ ಸವಾರರ ಮತ್ತು ಹಸುವಿನ ಜೀವ ರಕ್ಷಣೆಗೆ ಮುಂದಾಗಿರುವುದು ನೋಡಿ ನಮಗೆ ಅತೀವ ಸಂತಸ ತಂದಿದೆ, ತಮ್ಮೆಲ್ಲರ ಈ ತುರ್ತು ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿರಾಜಪೇಟೆ ಡಿ.ವೈ.ಎಸ್.ಪಿ. ಶ್ರೀಮಾನ್ ಮಹೇಶ್ ಕುಮಾರ್ ರವರಿಗೂ, ಸರ್ಕಲ್ ಇನ್ಸ್ ಪೆಕ್ಟರ್ ರವರಾದ ಅನೂಪ್ ಮಾದಪ್ಪರವರಿಗೂ, ಗ್ರಾಮಾಂತರ ಠಾಣಾಧಿಕಾರಿ ಶ್ರೀಮತಿ ಲತಾರವರಿಗೂ, ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ವಾಣಿರವರಿಗೂ ಮತ್ತು ಈ ಕಾರ್ಯದಲ್ಲಿ ಭಾಗಿಯಾದಂತಹ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರಿಗೂ ನಾವು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತಾ, ತಮಗೆಲ್ಲರಿಗೂ ತಾಯಿ ಕಾವೇರಿ ಮಾತೆಯ ಅನುಗ್ರಹ ಸದಾ ಇರಲೆಂದು ದೇವರಲ್ಲಿ ಪ್ರಾರ್ಥಸುತ್ತೇವೆ.

ವಂದನೆಗಳು 🙏🙏🙏

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!