ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಮರದ ತುಂಡುಗಳನ್ನು ತೆರವುಗೊಳಿಸುವ ಬಗ್ಗೆ.ಇಂಜಿನಿಯರ್ ಎ.ಇ.ಇ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಗೋಣಿಕೊಪ್ಪ ಉಪವಿಭಾಗ – ಕೊಡಗು ಇವರಿಗೆ ಮನವಿ ಪತ್ರ.
ಮಾನ್ಯರೇ,
ವಿರಾಜಪೇಟೆ ಗೋಣಿಕೊಪ್ಪ ರಸ್ತೆ ಮಾರ್ಗದಲ್ಲಿ ಬರುವ ವನಭದ್ರಕಾಳಿ ದೇವರ ದೇವಾಸ್ಥಾನದಿಂದ ಸ್ವಲ್ಪ ಮುಂದೆ ಬರುವ ರಸ್ತೆ ತಿರುವಿನಲ್ಲಿ ರಸ್ತೆಯ ಎರಡೂ ಕಡೆ ಹೊಸದಾಗಿ ವಿದ್ಯುತ್ ಕಂಬ ಮತ್ತು ಲೈನ್ ಗಳನ್ನು ಎಳೆಯುವಾಗ ಲೈನ್ ಗೆ ಅಡ್ಡಲಾಗಿ ಬರುವ ಮರವನ್ನು ಕತ್ತರಿಸಿದಾಗ ಅದರ ದೊಡ್ಡ ದೊಡ್ಡ ಮರದ ತುಂಡು ಗಳು ರಸ್ತೆಯ ಎರಡು ಕಡೆ ರಸ್ತೆಯ ಬಿಳಿ ಪೆಟ್ಟಿಗೆ ಹೊಂದಿಕೊಂಡು ಬಿದ್ದಿದ್ದು, ಸದರಿ ಸ್ಥಳದಲ್ಲಿ ಈಗಾಗಲೇ ಎರಡೂ ಕಡೆ ವಾಹನಗಳಿಗೆ ರಸ್ತೆ ಬದಿಗೆ ಜಾಗ ಕಡಿಮೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಜನರ ಜೀವಕ್ಕೆ ಅಪಾಯವಾಗುವ ಸಂಭವ ಇರುವುದರಿಂದ ಸದರಿ ರಸ್ತೆಯ ಎರಡೂ ಕಡೆ ರಸ್ತೆಗೆ ಹೊಂದಿಕೊಂಡು ಬಿದ್ದಿರುವ ಮರದ ತುಂಡುಗಳನ್ನು ತುರ್ತಾಗಿ ತೆರವುಗೊಳಿಸಿ- ವಾಹನ ಸವಾರರ ಜೀವ ರಕ್ಷಣೆ ಮಾಡಿಕೊಡಬೇಕಾಗಿ ನಾವುಗಳು ತಮ್ಮಲ್ಲಿ ವಿಶೇಷ ಮನವಿ ಮತ್ತು ಪ್ರಾರ್ಥನೆ ಮಾಡಿ ಕೊಳ್ಳುತ್ತೇವೆ.
ವಂದನೆಗಳು….





