✍️✍️✍️✍️✍️ಕೆಂಜಗಡ ರೋಶನ್ ನಾಣಯ್ಯ ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೊಡಗು – ಬೆಂಗಳೂರು, 9448619408
ಬಿಟ್ಟಂಗಾಲ ಮಂಡಲ್ ಪಂಚಾಯಿತಿ ಅಧ್ಯಕ್ಷರು ಆಡಳಿತ ಮಂಡಳಿ ಮತ್ತು ಪಿ.ಡಿ.ಓ. ಅವರಿಗೆ ಮನವಿ ಪತ್ರ
ಬುಟ್ಟಂಗಾಲ ಗ್ರಾಮ ಪಂಚಾಯಿತಿ ದಕ್ಷಿಣ ಕೊಡಗು – 571218
ವಿಷಯ: ರಾತ್ರಿ ಮತ್ತು ಹಗಲು ಹಸುಗಳು ರಸ್ತೆ, ಮಧ್ಯೆ ದಾಟುವುದುನ್ನು ತಡೆಗಟ್ಟುವ ಬಗ್ಗೆ:-
ದಿನಾಂಕ 18-01-2026 ನೇ ರಾತ್ರಿ ಸುಮಾರು 8-10 ನಿಮಿಷಕ್ಕೆ ವಿರಾಜಪೇಟೆಯಿಂದ ಆರ್ ಕೆ ಎಫ್ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯಲ್ಲಿ ನಾನು ನನ್ನ ಮನೆಗೆ ಬರುತ್ತಿದ್ದಾಗ ನನ್ನ ವಾಹನದ ಮುಂಭಾಗದಲ್ಲಿ 2 ವಾಹನ ಹೋಗುತ್ತಿತ್ತು. ಮೊದಲನೆಯದಾಗಿ – ಸಿಲ್ವರ್ ಬಣ್ಣದ ಮಾರುತಿ ವ್ಯಾನ್ ಹೋಗುತ್ತಿತ್ತು. ನಾನು ನೋಡ ನೋಡುತ್ತಿದ್ದ ಹಾಗೆ ಮಾರುತಿ ವ್ಯಾನ್ ರಸ್ತೆಯಲ್ಲಿ ಮಗುಚಿ ಬೀಳುವ ಹಾಗೆ ಕಾಣುತ್ತಿತ್ತು. ನೋಡಿದರೆ ರಸ್ತೆ ಮಧ್ಯದಲ್ಲಿ 3 ದೊಡ್ಡ ದೊಡ್ಡ ಹಸುಗಳು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಅಡ್ಡಲಾಗಿ ದಾಟುತ್ತಿತ್ತು ಸದರಿ ಚಿತ್ರಣದಲ್ಲಿ ಮಾರುತಿ ವ್ಯಾನಿನವರು ಹಸುವಿಗೆ ಗುದ್ದಿ ಅಪಘಾತ ವಾಗುವುದನ್ನು ತಪ್ಪಿಸಲು ಮತ್ತು ಹಸುವಿನ ಜೊತೆಗೆ ವಾಹನ ಸವಾರರ ಪ್ರಾಣವನ್ನು ರಕ್ಷಿಸಿಕೊಳ್ಳಲು ಮಾಡಿದ ಪ್ರಯತ್ನ ನೋಡಿ ನನಗೆ ಆಶ್ಚರ್ಯ ವಾಯಿತು. ಏಕೆಂದರೆ ಹಸುಗಳ ಮಾಲೀಕರು ಮಾಡುವ ಒಂದು ಸಣ್ಣ ತಪ್ಪಿನಿಂದ – ರಸ್ತೆಯಲ್ಲಿ ಓಡಾಡುವ ವಾಹನ ಸವಾರರ ಮತ್ತು ಹಸುವಿನ ಪ್ರಾಣಕ್ಕೆ ದಕ್ಕೆ ಬರುವುದು, ಖಚಿತ, ಕಾರಣ ಏನೆಂದರೆ ಹಸುವಿನ ಮಾಲೀಕರು ಹಸುವಿನ ಜೊತೆ ಇರುವುದಿಲ್ಲ ಇದನ್ನು ಬಿಟ್ಟಂಗಾಲ ಗ್ರಾಮ ಪಂಚಾಯಿತಿಯವರು ಬಹಳ ಗಂಭಿರವಾಗಿ ಪರಿಗಣಿಸಿ ಇದು ಬಹಳ ಹಳೆಯ ಸಮಸ್ಯೆಯಾಗಿದ್ದು, ಸದರಿ ಸ್ಥಳದಲ್ಲಿ ಹಸುಗಳಿಗೆ ವಾಹನ ಸವಾರರು ಗುದ್ದಿ ಈ ಹಿಂದೆ ಪ್ರಾಣ ಕಳೆದುಕೊಂಡ ಉದಾಹರಣೆ ಇರುವುದರಿಂದ ತಾವುಗಳು ಈ ಕೂಡಲೇ ಹಸುಗಳ ಮಾಲೀಕರ ಮನೆ-ಮನೆಗೆ ಭೇಟಿ ನೀಡಿ ಅವರಿಗೆ ಮನವರಿಕೆ ಮಾಡಿ ಹಸುಗಳ ಜೊತೆ ಮಾಲೀಕರು ಜೊತೆಯಲ್ಲೇ ಹೋಗಿ ರಸ್ತೆ ದಾಟಿಸುವುದು ಇಲ್ಲದಿದ್ದರೆ ರಸ್ತೆಯ ಭಾಗಕ್ಕೆ ಹಸುಗಳನ್ನು ಬಿಡುವುದನ್ನು ಸಂಪೂರ್ಣ ನಿಲ್ಲಿಸಲು ಹಸುಗಳ ಮಾಲೀಕರಿಗೆ ಜಾಗೃತಿ ಮೂಡಿಸಿ ವಾಹನ ಸವಾರರ ಅಮೂಲ್ಯ ಜೀವವನ್ನು ಉಳಿಸಲು ಮತ್ತು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಲು ತಾವುಗಳು ಪ್ರಯತ್ನ ಮಾಡಬೇಕಾಗಿ ನಾನು ಸವಿನಯ ಪ್ರಾರ್ಥನೆ ಮಾಡುತ್ತಾ ಹಾಗೆ ಈ ಕಾರ್ಯ ಕ್ರಮದಲ್ಲಿ ನಾನೂ ಸಹ ಸದರಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಿಮ್ಮ ಜೊತೆಯಲ್ಲಿ ಕೈಜೋಡಿಸಿ ಹಸುವಿನ ಮಾಲೀಕರ ಮನ ಮನೆಗೆ ಹೋಗಿ ಅವರ ಜೊತೆ ಮಾತುಕತೆ ಮಾಡಿ ಮನಪರಿವರ್ತನೆ ಮಾಡಲು ಪ್ರಯತ್ನಿಸಲು ಇಚ್ಛಿಸುತ್ತೇನೆ.
ವಂದನೆಗಳು🙏🙏



