ಸೋಮವಾರಪೇಟೆ ಡಿ.29: ಭಾರತೀಯ ಜನತಾ ಪಕ್ಷ ಸೋಮವಾರಪೇಟೆ ಮಂಡಲದ ವತಿಯಿಂದ ನಡೆಯುತ್ತಿರುವ ಬಿಎಲ್ಎ 2 ಕಾರ್ಯಗಾರವು ಮಂಡಲ ಅಧ್ಯಕ್ಷರಾದ ಗೌತಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ತಿನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಆಗಮಿಸಿದ್ದರು, ಇದೆ ಸಂದರ್ಭ ಮಾಜಿ ಶಾಸಕರುಗಳಾದ ಕೆ. ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಮಾಜಿ ಜಿಲ್ಲಾಧಕ್ಷ್ಯರಾದ ಬಿ. ಬಿ. ಭಾರತೀಶ್, ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಮೇದಪ್ಪ ಮುಂತಾದವರು ಉಪಸ್ಥಿತರಿದ್ದರು






