Google search engine
Home♦️ಇತ್ತೀಚಿನ ಸುದ್ದಿಗಳು.ಸೆಂಟ್ರಲ್ ಕಾಫಿ ರಿಸರ್ಚ್ ಇನ್‌ಸ್ಟಿಟ್ಯೂಟ್ (CCRI) ಸಂಸ್ಥೆಗೆ ಶತಮಾನೋತ್ಸವದ ಸಂಭ್ರಮ , ಕಾಫಿ ಬೆಳೆಗೆ ಸಂಬಂಧಿಸಿದ...

ಸೆಂಟ್ರಲ್ ಕಾಫಿ ರಿಸರ್ಚ್ ಇನ್‌ಸ್ಟಿಟ್ಯೂಟ್ (CCRI) ಸಂಸ್ಥೆಗೆ ಶತಮಾನೋತ್ಸವದ ಸಂಭ್ರಮ , ಕಾಫಿ ಬೆಳೆಗೆ ಸಂಬಂಧಿಸಿದ ವಿವಿಧ ಕಾರ್ಯಾಗಾರಗಳ ಆಯೋಜನೆ.

ಸೆಂಟ್ರಲ್ ಕಾಫಿ ರಿಸರ್ಚ್ ಇನ್‌ಸ್ಟಿಟ್ಯೂಟ್ (CCRI) ಸಂಸ್ಥೆಗೆ ಶತಮಾನೋತ್ಸವದ ಸಂಭ್ರಮ , ಕಾಫಿ ಬೆಳೆಗೆ ಸಂಬಂಧಿಸಿದ ವಿವಿಧ ಕಾರ್ಯಾಗಾರಗಳ ಆಯೋಜನೆ.

ಸೆಂಟ್ರಲ್ ಕಾಫಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಸಿಆರ್‌ಐ)  100ನೇ ವರ್ಷದ  ಶತಮಾನೋತ್ಸವ ಆಚರಣೆಯನ್ನು ಇದೆ ಡಿಸೆಂಬರ್ 20, 22, 2025 ರಂದು ಚಿಕ್ಕಮಗಳೂರಿನಲ್ಲಿ  ಹಮ್ಮಿಕೊಳ್ಳಲಾಗಿದೆ.

1925 ರಲ್ಲಿ ಹಿಂದಿನ ಮೈಸೂರು ಸರ್ಕಾರದ ಅಡಿಯಲ್ಲಿ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಕಾಫಿ ಪ್ರಯೋಗ  ಕೇಂದ್ರ ಸ್ಥಾಪನೆಯಾಯಿತು.

ಆಗಿನ ಕೃಷಿ ನಿರ್ದೇಶಕರಾಗಿದ್ದ  ವಿಜ್ಞಾನಿ ಡಾ. ಲೆಸ್ಲೀ ಸಿ. ಕೋಲ್ಮನ್ ಅವರಿಗೆ ಕಾಫಿಯ ಎಲೆ ತುಕ್ಕು ರೋಗಕ್ಕೆ ಪರಿಹಾರವನ್ನು ಕಂಡುಹಿಡಿಯುವ ಕಾರ್ಯವನ್ನು ವಹಿಸಲಾಗಿತ್ತು.  ಅಂದು ಆರಂಭವಾದ  ಕಾಫಿ ಸಂಶೋಧನೆಯ ಅದ್ಭುತ ಪಯಣವು ಈಗ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯಾಗಿ  (ಸಿಸಿಆರ್‌ಐ) ಎತ್ತರಕ್ಕೆ ಬೆಳೆದು ನಿಂತಿದೆ. 

ಪ್ರಾರಂಭದಲ್ಲಿ 7 ಕಾಫಿ ಬೀಜಗಳನ್ನು ನಂಬಿಕೆಯೊಂದಿಗೆ ನೆಡಲಾಗಿ ಇಂದು ಭಾರತದಲ್ಲಿ ಕಾಫಿ 7 ಲಕ್ಷ ಟನ್‌ ಗಳಿಗೂ ಹೆಚ್ಚು ಕಾಫಿ ಉತ್ಪಾದಿಸುವದೊಂದಿಗೆ  ಭರವಸೆಯತ್ತ ಸಾಗುತ್ತ (ಸಿಸಿಆರ್‌ಐ)  ಲಕ್ಷಾಂತರ ರೈತರು ಮತ್ತು ಪಾಲುದಾರರ ಜೀವನವನ್ನು ಉನ್ನತೀಕರಿಸುವ ಭರವಸೆಯ ಕಿರಣವಾಗಿ ಸಂಸ್ಥೆಯು ಪ್ರಗತಿ ಪಥದಲ್ಲಿ ಸಾಗುತ್ತಿದೆ.

  ಬೆಳೆಗಾರರು, ಸಂಶೋಧಕರು, ವಾಣಿಜ್ಯೋದ್ಯಮಿಗಳು ಮತ್ತು ಉತ್ಸಾಹಿ ರೈತರು ಪಾಲ್ಗೊಳ್ಳಲಿರುವ   (ಸಿಸಿಆರ್‌ಐ)ನ  ಶತಮಾನೋತ್ಸವ ಸಮ್ಮೇಳನದ ಸಮಾರಂಭ ಚಿಕ್ಕಮಗಳೂರಿನ ಬಾಳೆಹೊನ್ನೂರು ಬಳಿಯಿರುವ ಸಿಸಿಆರ್‌ಐ ಕ್ಯಾಂಪಸ್‌ನಲ್ಲಿ ಜರುಗಲಿದೆ.

ಸಮೇಳದಲ್ಲಿ ಕಾಫಿ ಕೃಷಿಗೆ ಸಂಬಂಧಿದಂತೆ ಅನೇಕ ಕಾರ್ಯಾಗಾರಗಳು ನಡೆಯಲಿವೆ, ಹೆಚ್ಚು ಇಳುವರಿ ನೀಡುವ ಹೊಸ ಕಾಫಿಯ ತಳಿಗಳು , ರೋಗಬಾದೆ ,ಕೀಟ-ನಿರೋಧಕ ಕಾಫಿ ಪ್ರಭೇದಗಳ  ಪ್ರದರ್ಶನ,  ಹವಾಮಾನ ವೈಪರಿತ್ಯ, ಅಂತರಾಷ್ಟ್ರೀಯ ಮಾರುಕಟ್ಟೆ, ಪ್ರಾಯೋಗಿಕ ತರಬೇತಿಗಳು, ಕಾಫಿಯ ಉತ್ಪನ್ನಗಳು, ಹೊಸ ತಂತ್ರಜ್ಞಾನಗಳು, ಕೃಷಿ-ಮಾಹಿತಿ,  ಸಮರ್ಥ ನೀರಾವರಿ ವ್ಯವಸ್ಥೆಗಳು, ವಸ್ತುಪ್ರದರ್ಶನಗಳು. ಹೊಸ ಕೃಷಿ ಸಲಕರಣೆಗಳು, ತೋಟದ ಕಾರ್ಮಿಕರು ಮುಂತಾದ ವಿಷಯಗಳ ಕುರಿತು ಮಾಹಿತಿ ಹಾಗೂ ಕಾರ್ಯಾಗಾರಗಳು ನಡೆಯಲಿವೆ. ಸುಮಾರು 50 ಕ್ಕೂ ಅಧಿಕ ವಿಜ್ಞಾನಿಗಳು, ಮಾರುಕಟ್ಟೆ ತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಲಿರುವರು.

ಸಮಾರಂಭದ ವಿವರಗಳು ಮತ್ತು ನೋಂದಣಿ ಪ್ರಕ್ರಿಯೆಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಲಭ್ಯವಿದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ  (ಸಿಸಿಆರ್‌ಐ) ನ ಅಧಿಕೃತ ಶತಮಾನೋತ್ಸವದ ವೆಬ್‌ಸೈಟ್ ಮೂಲಕ ಕಾರ್ಯಕ್ರಮಗಳಿಗೆ ಹಾಜರಾಗಲು ನೋಂದಾಯಿಸಿಕೊಳ್ಳಬಹುದು. ವೆಬ್‌ಸೈಟ್: www.ccri100.org 

www.ccri100.org

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!