Google search engine
Home♦️ಇತ್ತೀಚಿನ ಸುದ್ದಿಗಳು.ರೊಂಡೆ ಕೆರೆಯ  ಏರಿ ಹಾಗು ನಾಲೆಯ ಅಭಿವೃದ್ದಿ ಕಾಮಗಾರಿಗೆ ಶಾಸಕ ಡಾಕ್ಟರ್ ಮಂತರ್ ಗೌಡ  ಅವರಿಂದ...

ರೊಂಡೆ ಕೆರೆಯ  ಏರಿ ಹಾಗು ನಾಲೆಯ ಅಭಿವೃದ್ದಿ ಕಾಮಗಾರಿಗೆ ಶಾಸಕ ಡಾಕ್ಟರ್ ಮಂತರ್ ಗೌಡ  ಅವರಿಂದ ಗುದ್ದಲಿ ಪೂಜೆ.

ಕುಶಾಲನಗರ ಮಾ.03: ಕುಶಾಲನಗರ ತಾಲೂಕು ಗೊಂದಿಬಸವನಹಳ್ಳಿ ಸಮೀಪ ಸುಮಾರು  1 ಕೋಟಿ 60ಲಕ್ಷಗಳ  ವೆಚ್ಚದ  ರೊಂಡೆಕೆರೆಯ  ಏರಿ ಹಾಗು ನಾಲಾ ಅಭಿವೃದ್ದಿ ಕಾಮಗಾರಿಗೆ ಶಾಸಕ ಮಂತರ್ ಗೌಡ ಅವರು  ಇಂದು ಗುದ್ದಲಿಪೂಜೆ ನೆರವೇರಿಸಿದರು.

ರೈತರ 25 ವರ್ಷಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕರು

ಪ್ರತಿಬಾರಿ ಮಳೆಗಾಲದಲ್ಲಿ ಸುರಿಯುವ ಬಿರುಸಿನ ಮಳೆಯಿಂದ ಕೆರೆಯಲ್ಲಿನ ನೀರಿನ ಪ್ರಮಾಣ ಹೆಚ್ಚಳವಾಗಿ  ಕೆರೆಯ ತಡೆಗೋಡೆ (ಕಟ್ಟೆ) ಒಡೆದು ಅಪಾರ ಪ್ರಮಾಣದ ನೀರು ರೈತರ ಕೃಷಿ ಭೂಮಿಗೆ ಹರಿದು ಜಮೀನುಗಳು ಜಲಾವೃತವಾಗಿ ರೈತರು ತೊಂದರೆಗೊಳಗಾಗುತ್ತಿದ್ದರು. ಪರಿಣಾಮ ಬೇಸಿಗೆಯಲ್ಲಿ ಕೆರೆಯಲ್ಲಿ ನೀರಿನ ಪ್ರಮಾಣ ಕಮ್ಮಿಯಾಗಿ ಕೃಷಿ ಭೂಮಿಯ ಬೋರ್ವೆಲ್ಗಳಿಗೆ ಅಂತರಜಲ  ಕುಸಿಯುವ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರವಾಗುವ  ಆತಂಕ ರೈತರಲ್ಲಿ ಮನೆಮಾಡಿತ್ತು. ರೈತರ ಈಸಮಸ್ಯೆಗೆ ಶಾಸಕರು ಆದ್ಯತೆಯ ಮೇರೆಗೆ ಕೆರೆ ಕಾಮಗಾರಿಯನ್ನು  ಕೈಗೆತ್ತಿಕೊಂಡಿರುವುದಾಗಿ  ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ವಿಪಿ ಶಶಿಧರ್, ಎಂ. ಎಂ.ಪ್ರಕಾಶ್ ನಾಮ ನಿರ್ದೇಶಿತ ಸದಸ್ಯರು ಪುರಸಭೆ ಕುಶಾಲನಗರ,ತಹಶೀಲ್ದಾರ್ ಕಿರಣ್ ಗೌರಯ್ಯ, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಗೋವಿಂದಪ್ಪ.ಕೆಪಿಸಿಸಿ ಸದಸ್ಯರಾದ ಕೆ.ಪಿ. ಚಂದ್ರಕಲಾ,ಮಂಜುನಾಥ್ ಗುಂಡೂರಾವ್, ಕುಶಾಲನಗರ ಕಾಂಗ್ರೆಸ್ ಅದ್ಯಕ್ಷರು ಜೋಸೆಫ್ ವಿಕ್ಟರ್ , ಕೊಡಗು ಜಿಲ್ಲಾ ಮಹಿಳಾ ಅಧ್ಯಕ್ಷೆ ಪುಷ್ಪಲತಾ, ಸಂಗೀತ ರವಿ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಗ್ರಾಮಸ್ಥರು ಉಪಸ್ಥಿತರಿದ್ದರು .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!