Google search engine
Home♦️ಕೊಡಗಿನ ಗಡಿಯಾಚಿನ ಸುದ್ದಿಗಳುಮಾಲಿನ್ಯ ರಹಿತ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ  ಹೈಡ್ರೋಜನ್ ಇಂಧನ ಕೋಶ ಹೊಂದಿರುವ ಕಾರಿನಲ್ಲಿ ಪ್ರಯಾಣಿಸಿದ ಕೇಂದ್ರ...

ಮಾಲಿನ್ಯ ರಹಿತ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ  ಹೈಡ್ರೋಜನ್ ಇಂಧನ ಕೋಶ ಹೊಂದಿರುವ ಕಾರಿನಲ್ಲಿ ಪ್ರಯಾಣಿಸಿದ ಕೇಂದ್ರ ಸಚಿವರುಗಳು

ಬೆಂಗಳೂರು ಜ.6:  ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ  ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ  ನಿತಿನ್ ಗಡ್ಕರಿ ಅವರು ಇಂದು ಟೊಯೋಟಾ ಮಿರೈ ಹೈಡ್ರೋಜನ್ ಇಂಧನ ಕೋಶ ಎಲೆಕ್ಟ್ರಿಕ್ ವಾಹನದಲ್ಲಿ  (ಎಫ್‌ ಸಿ ಇ ವಿ) ಮಾಲಿನ್ಯ ರಹಿತ ಸಾರಿಗೆಯನ್ನು ಉತ್ತೇಜಿಸಲು ಜಂಟಿಯಾಗಿ ಪ್ರಯಾಣಿಸಿದರು.

ಸಚಿವ ಪ್ರಲ್ಹಾದ್ ಜೋಶಿ ಅವರು ದೇಶದಲ್ಲಿ ಹಸಿರು ಹೈಡ್ರೋಜನ್ ಮತ್ತು ಮಾಲಿನ್ಯ ರಹಿತ ಸಾರಿಗೆ ಉತ್ತೇಜಿಸುವಲ್ಲಿ ಸರ್ಕಾರದ ಬದ್ಧತೆಯನ್ನು ತೋರಿಸಲು, ಭಾರತ ಮಂಟಪದಿಂದ ನಿತಿನ್ ಗಡ್ಕರಿ ಅವರ ನಿವಾಸದವರೆಗೆ ‘ಮಿರೈ’ ವಾಹನವನ್ನು ಸ್ವತಹ ತಾವೇ ಚಲಾಯಿಸಿದರು.

ಟೊಯೋಟಾ ‘ಮಿರೈ’ ಎರಡನೇ ತಲೆಮಾರಿನ ಹೈಡ್ರೋಜನ್ ಇಂಧನ ಕೋಶ ಎಲೆಕ್ಟ್ರಿಕ್ ವಾಹನವಾಗಿದ್ದು (ಎಫ್‌ ಸಿ ಇ ವಿ).  ಜಲಜನಕ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಕೇವಲ ನೀರಿನ ಹಬೆಯನ್ನು ಮಾತ್ರ ಹೊರಹಾಕುತ್ತದೆ. ಒಮ್ಮೆ ಇಂಧನ ತುಂಬಿಸಿದರೆ ಸುಮಾರು 650 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿರುವ ಈ ಕಾರು, ಐದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಇಂಧನ ಮರುಪೂರಣ ಮಾಡಿಕೊಳ್ಳಬಲ್ಲದು. ಇದು ವಿಶ್ವದ ಅತ್ಯಂತ ಸುಧಾರಿತ ಮತ್ತು ದಕ್ಷವಾದ ಮಾಲಿನ್ಯರಹಿತ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!