ಪೊನ್ನಂಪೇಟೆ ಜ. 3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್(ರಿ )ವಿರಾಜಪೇಟೆ ತಾಲೂಕು ಹಾಗೂ ಸ್ವ ಸಹಾಯ ಸಂಘಗಳ ಒಕ್ಕೂಟಗಳು, ಇವರ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಕೃಷಿ ಯಾಂತ್ರೀಕರಣ ಮಾಹಿತಿ ಕಾರ್ಯಕ್ರಮ ಕಾನೂರು ವಲಯದ ಬ್ರಹ್ಮಗಿರಿ ಕಾರ್ಯಕ್ಷೇತ್ರದ ಮಲ್ಲಂಗೆರೆ ಯಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಪೊನ್ನಂಪೇಟೆ ತಾಲೂಕಿನ ಸರ್ಕಾರಿ ಸಹಾಯಕ ಕೃಷಿ ಅಧಿಕಾರಿಯಾದ ಮೀರಾ ರವರು ಮಾತನಾಡಿ ಕೃಷಿ ಯಾಂತ್ರಿಕೀಕರಣಕ್ಕೆ ನಮ್ಮ ಕೃಷಿ ಇಲಾಖೆಯಿಂದ ಕೃಷಿ ಯಂತ್ರಗಳ ಖರೀದಿಗೆ ಸಾಲ ಸೌಲಭ್ಯ ಕೃಷಿ ಯಂತ್ರಗಳ ಬಳಕೆ ನಿರ್ವಹಣೆ ಬಗ್ಗೆ ಯಂತ್ರಗಳ ಖರೀದಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಯಾವ ಯಂತ್ರಗಳನ್ನು ಖರೀದಿ ಮಾಡಿದರೆ ಎಷ್ಟು ಸಹಾಯಧನ ಸಿಗುತ್ತದೆ ಮತ್ತು ಸರ್ಕಾರದ ಯೋಜನೆಯಾದ ಪಿಎಂಎಫಎಂ ಕಾರ್ಯಕ್ರಮದ ಬಗ್ಗೆ ಕುರಿತು ಮಾಹಿತಿ ನೀಡಿದರು.
ಹಾಗೂ ಹಿಂದುಳಿದ ವರ್ಗಗಳಿಗೆ ಕೃಷಿ ಇಲಾಖೆಯಿಂದ ಸಿಗುವ ಅನುದಾನಗಳ ಬಗ್ಗೆ ಜಮೀನು ಹೊಂದಿರುವ ರೈತರು ಹೇಗೆ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಕೃಷಿ ಮೇಲ್ವಿಚಾರಕರಾದ ವಸಂತ್ ಕಾರ್ಯಕ್ರಮ ನಿರೂಪಿಸಿದರು, ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಕಾಶಿ ಬ್ರಹ್ಮಗಿರಿ ಒಕ್ಕೂಟದ ಅಧ್ಯಕ್ಷರಾದ ಸುನೀತಾ ಸೇವಾ ಪ್ರತಿನಿಧಿ ಯಾದ ಉದಯ ಪ್ರಗತಿಪರ ಕೃಷಿಕರು ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.




