Google search engine
Home♦️ಇತ್ತೀಚಿನ ಸುದ್ದಿಗಳು.ಯುರೋಕಿಡ್ಸ್  ಪಬ್ಲಿಕ್ ಶಾಲೆಯಲ್ಲಿ ಟ್ಯಾಲೆಂಟ್ ಡಿಸ್ಪ್ಲೇ ಹಾಗೂ ಗ್ರಾಜುಯೇಷನ್ ಡೇ' ಆಚರಣೆ.

ಯುರೋಕಿಡ್ಸ್  ಪಬ್ಲಿಕ್ ಶಾಲೆಯಲ್ಲಿ ಟ್ಯಾಲೆಂಟ್ ಡಿಸ್ಪ್ಲೇ ಹಾಗೂ ಗ್ರಾಜುಯೇಷನ್ ಡೇ’ ಆಚರಣೆ.

ಮಡಿಕೇರಿ, ಮಾ.4: ನಗರದ ಹೊಸಬಡಾವಣೆಯಲ್ಲಿ ಇರುವ ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ ‘ಟ್ಯಾಲೆಂಟ್ ಡಿಸ್ಪ್ಲೇ ಮತ್ತು ಗ್ರಾಜುಯೇಷನ್ ಡೇ’ ಜರುಗಿತು.

ದೀಪವನ್ನು ಹಿಡಿದು ಯು.ಕೆ.ಜಿ ಮಕ್ಕಳು ತಮ್ಮ ‘ಗ್ರಾಜುಯೇಷನ್ ಡೇ’ ಯನ್ನು ಸಂಭ್ರಮಿಸಿದರು.  ಒಳ್ಳೆಯ ಪ್ರಜೆಯಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗುವನೆಂಬ ಪ್ರತಿಜ್ಞೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.

ಸಮಾರಂಭದ ಮುಖ್ಯ ಅತಿಥಿ ನಗರಸಭಾ ಸದಸ್ಯೆ ನೆರವಂಡ  ಅನಿತಾ ಪೂವಯ್ಯ ಮಾತನಾಡಿ,ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಧನಾತ್ಮಕ ಚಿಂತನೆನ್ನು ಅಳವಡಿಸಿಕೊಳ್ಳಬೇಕೆಂದು ಹಿತವಚನ ನುಡಿದರು. .ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಂ ನಾಣಯ್ಯ, ಮಕ್ಕಳನ್ನು ಮೊಬೈಲ್ ಮಾಯಾಜಾಲದಿಂದ ದೂರವಿಡಬೇಕೆಂಬ ಬಗ್ಗೆ ಪೋಷಕರಿಗೆ ಸಲಹೆ ನೀಡಿದರು.

ಶಾಲೆಯ ಪ್ರಾಂಶುಪಾಲೆ ರಶ್ಮಿದೀಪ ಎನ್. ಟಿ. ಟಿ  ಪ್ರತಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಿದರು.  ವಿದ್ಯಾರ್ಥಿಗಳಿಂದ ‘ಸಿದ್ಧಾರ್ಥನಿಂದ ಬುದ್ಧನೆಡೆಗೆ’ ಎಂಬ ಕಿರುನಾಟಕವನ್ನು ಪ್ರದರ್ಶಿತವಾಯಿತು.  ‘ಆಸೆಯೇ ದು:ಖಕ್ಕೆ ಮೂಲ’ ಎಂಬ ಗೌತಮಬುದ್ಧನ ತತ್ವವನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳು ಅಭಿನಯಿಸಿದರು.

 ಅಶ್ಲೀಲತೆಯ ಸೋಂಕಿಲ್ಲದ, ಭಾವಾಭಿನಯದ ಕನ್ನಡ ನುಡಿಯನ್ನು ಹಾಡಿ ಹೋಗಳುವ, ರೆಟ್ರೋ ಶೈಲಿಯ ಸೇರಿದಂತೆ  ಹಲವಾರು ವೈವಿಧ್ಯಮಯ ಸದಭಿರುಚಿಯ ಕಾರ್ಯಕ್ರಮಗಳು ಮೂಡಿಬಂದವು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು,, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!