Google search engine
Home♦️ಇತ್ತೀಚಿನ ಸುದ್ದಿಗಳು.ಮಡಿಕೇರಿಯ ರೋಶನಾರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127 ನೇ ಜನ್ಮಜಯಂತಿ ಆಚರಣೆ.

ಮಡಿಕೇರಿಯ ರೋಶನಾರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127 ನೇ ಜನ್ಮಜಯಂತಿ ಆಚರಣೆ.

ಮಡಿಕೇರಿ ಜ.28:  ಇಂದು ಭಾರತೀಯ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127 ನೇ ಜನ್ಮ ಜಯಂತಿಯನ್ನು  ನಗರದ ಹೊರವಲಯದಲ್ಲಿನ ಅವರ ನೆಚ್ಚಿನ ಮನೆಯಾಗಿದ್ದ ರೋಶನಾರದಲ್ಲಿ  ಪುಷ್ಪನಮನದ ಮೂಲಕ ಬಾವಪೂರ್ಣವಾಗಿ ಆಚರಿಸಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರಿ ನಳಿನಿ ಕಾರ್ಯಪ್ಪ ಅವರು ಸಮಾಧಿ ಸ್ಥಳದಲ್ಲಿ ಜ್ಯೋತಿ ಬೆಳಗಿದರು.  ಈ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ  ಅವರ ಪುತ್ರ ನಿವೃತ್ತ ಏ‌ರ್ ಮಾರ್ಷಲ್ ನಂದಾಕಾರ್ಯಪ್ಪ , ಸೊಸೆ ಮೀನಾ ಕಾರ್ಯಪ್ಪ , ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಗುರುದತ್, ನಿಯತಾ ದೇವಯ್ಯ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್, ಕರ್ನಲ್ ಕಾವೇರಪ್ಪ ಪ್ರೇಮ್‌ ನಾಥ್, ಬಾಬು ಸೋಮಯ್ಯ ಅವರ ಸೇರಿದಂತೆ ಮಾಜಿ ಸೈನಿಕರು, ಕೊಡಗು ವಿದ್ಯಾಲಯದ ಎನ್ ಸಿಸಿ ಕೆಡೆಟ್ ಗಳು, ಶಿಕ್ಷಕರು, ಹಾಗೂ ಕೂಡಿಗೆ ಸೈನಿಕ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!