Google search engine
Home♦️ಇತ್ತೀಚಿನ ಸುದ್ದಿಗಳು.ಬೈರಂಬಾಡದಲ್ಲಿ ಸ್ವ-ಉದ್ಯೋಗ ಮಾಹಿತಿ ಕಾರ್ಯಕ್ರಮ

ಬೈರಂಬಾಡದಲ್ಲಿ ಸ್ವ-ಉದ್ಯೋಗ ಮಾಹಿತಿ ಕಾರ್ಯಕ್ರಮ

ಅಮ್ಮತ್ತಿ ಡಿ.29:   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್ (ರಿ )ವಿರಾಜಪೇಟೆ ತಾಲೂಕು,  ಸ್ವಸಹಾಯ ಸಂಘಗಳ ಒಕ್ಕೂಟಗಳು, ಇವರ ಆಶ್ರಯದಲ್ಲಿ  ಕೃಷಿ ಕಾರ್ಯಕ್ರಮದಡಿಯಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ ಅಮ್ಮತ್ತಿ ವಲಯದ ಹಾಲುಗುಂದ ಕಾರ್ಯಕ್ಷೇತ್ರದ ಬೈರಂಬಾಡ ಸಮುದಾಯ ಭವನದಲ್ಲಿ ನಡೆಯಿತು. 

ಸಂಪನ್ಮೂಲ ವ್ಯಕ್ತಿಯಾದ ಸ್ಟಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡ ಸುಧಾರವರು ಮಾತನಾಡಿ ತಾನು ಮನೆಯಲ್ಲಿ ತಯಾರಿಸಿದ ಮಸಾಲೆ ಪದಾರ್ಥಗಳು ಪ್ರಾರಂಭದಲ್ಲಿ ತಿಂಗಳಿಗೆ ಮೂರು ಸಾವಿರ ಆದಾಯ ಬರುತ್ತಿದ್ದು ಈಗ ತಿಂಗಳಿಗೆ ಐವತ್ತು ಸಾವಿರದವರೆಗೆ ಆದಾಯ ಬರುತ್ತದೆ  ಇದರಿಂದ ನನ್ನ ಜೀವನ ಮಟ್ಟ ಸುಧಾರಣೆ ಯಾಗಿದೆ ಯಾವ ರೀತಿಯಲ್ಲಿ ಮಸಾಲ ಪದಾರ್ಥಗಳ  ಮಾಡುವ ಬಗ್ಗೆ ಮತ್ತು ಅಣಬೆ ಕೃಷಿ ಮಾಡುವ ಬಗ್ಗೆ ಅಣಬೆ ಕೃಷಿ ಮಾಡುವುದು ತುಂಬಾ ಲಾಭದಾಯಕ ಕಡಿಮೆ ವೆಚ್ಚ ಹೆಚ್ಚು ಲಾಭಗಳಿಸಬಹುದು ಮನೆಯಲ್ಲಿ ಅಣಬೆ ಕೃಷಿ ಮಾಡಬಹುದು ಎಂದು ಮಾಹಿತಿ ನೀಡಿದರು.    

ವಲಯದ ಮೇಲ್ವಿಚಾರಕರಾದ ಧನೇಶ್ ಪ್ರಸ್ತಾವಿಕ ಮಾತನಾಡಿದರು,ಕೃಷಿ ಮೇಲ್ವಿಚಾರಕರಾದ ವಸಂತ್ ಕಾರ್ಯಕ್ರಮ ನಿರೂಪಿಸಿದರು   ಹಾಲುಗುಂದ ಸೇವಾ ಪ್ರತಿನಿಧಿ  ಮೀನಾಕ್ಷಿ ಸ್ವಾಗತಿಸಿದರು, ಚೆಂಬೆ ಬೆಳ್ಳೂರು  ಸೇವಾ ಪ್ರತಿನಿಧಿ ದೇವಕಿ ಪ್ರಗತಿಪರ ಕೃಷಿಕರು ಹಾಲ್ಗುಂದ  ಒಕ್ಕೂಟದ ಅಧ್ಯಕ್ಷರು ನೇತ್ರಾವತಿ , ದಮಯಂತಿ   ಸಂಘದ ಇತರೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!