ಪೊನ್ನಂಪೇಟೆ ಜ.4: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವಿರಾಜಪೇಟೆ ತಾಲೂಕು ಪೊನ್ನಂಪೇಟೆ ವಲಯದ ಶ್ರೀಮಂಗಲ ಕಾರ್ಯಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿ ವಾಣಿಜ್ಯ ನರ್ಸರಿ ರಚನೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶ್ರೀಮಂಗಲದ ಶ್ರೀ ಕನ್ನಂಬಾಡಿ ಅಮ್ಮ ನರ್ಸರಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನರ್ಸರಿ ಮಾಲೀಕರಾದ ವಿಜಯರವರು ಮಾತನಾಡಿ ತೋಟಗಾರಿಕಾ ಬೆಳೆಗಳಾದ ಕಾಳು ಮೆಣಸು ಅಡಿಕೆ ಕಿತ್ತಳೆ ಲಿಂಬೆ ಬೆಳೆಗಳನ್ನು ತೋಟದಲ್ಲಿ ಬೆಳೆಯುವುದರಿಂದ ಕುಟುಂಬದ ಆದಾಯದ ಜೊತೆಗೆ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಬಹುದು ವಾಣಿಜ್ಯ ಗಿಡಗಳಿಗೆ ಬರುವ ರೋಗಗಳಿಗೆ ಸೂಕ್ತ ಸಮಯದಲ್ಲಿ ಔಷಧಿ ಸಿಂಪಡಿಸಿ ಸಂರಕ್ಷಿಸಬಹುದು ಕಾಳು ಮೆಣಸು ಕಸಿ ಕಟ್ಟುವ ಬಗ್ಗೆ ಮತ್ತು ಕಾಫಿ ಸಸಿ ಮಾರಾಟ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ವಸಂತ ಶ್ರೀಮಂಗಲ ಒಕ್ಕೂಟದ ಅಧ್ಯಕ್ಷರಾದ ಬಿ ಡಿ ಮೀನಾ ಪದಾಧಿಕಾರಿಗಳಾದ ಮೀನಾಕ್ಷಿ ಕಿಶಾನ್ ಹೇಮವತಿ ಸೇವಾಪ್ರತಿನಿಧಿಗಳಾದ ಸರಳ ಗೀತಾ, ಪ್ರಗತಿಪರ ಕೃಷಿಕರು, ಸಂಘದ ಸದಸ್ಯರು ಉಪಸ್ಥಿತರಿದ್ದರು.





