
ನಂಜರಾಯಪಟ್ಟಣ ಡಿ.21 : ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಅಂಗನವಾಡಿ ಕೇಂದ್ರದಲ್ಲಿ ಪ್ರತಿ ಹನಿ ಅವಶ್ಯ, ಪ್ರತಿ ಮಗುವೂ ಅಮೂಲ್ಯ.ಪಲ್ಸ್ ಪೋಲಿಯೊ ಅಭಿಯಾನದ ಪ್ರಯುಕ್ತ ಈ ದಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾದ ರಕ್ಷಿತ್ ಮಾವಜಿ ಅವರು ಗ್ರಾಮದ ಪುಠಾಣಿ ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಹಾಕುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.




