Google search engine
Home♦️ಇತ್ತೀಚಿನ ಸುದ್ದಿಗಳು.ದುಬಾರೆ ರಿವರ್  ರಾಫ್ಟಿಂಗ್ ಗೈಡ್ಸ್ ಅಂಡ್ ಓನರ್ಸ್ ಅಸೋಸಿಯೇಷನ್ ವತಿಯಿಂದ  ಸ್ವಚ್ಛತಾ ಕಾರ್ಯಕ್ರಮ.

ದುಬಾರೆ ರಿವರ್  ರಾಫ್ಟಿಂಗ್ ಗೈಡ್ಸ್ ಅಂಡ್ ಓನರ್ಸ್ ಅಸೋಸಿಯೇಷನ್ ವತಿಯಿಂದ  ಸ್ವಚ್ಛತಾ ಕಾರ್ಯಕ್ರಮ.

ನಂಜರಾಯಪಟ್ಟಣ,ಮಾ.16: ಶುಚಿತ್ವಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಇಂದು ಮುಂಜಾನೆ ದುಬಾರೆಯ ರಿವರ್ ರಾಫ್ಟಿಂಗ್ ಅಸೋಸಿಯೇಷನ್ ವತಿಯಿಂದ ದುಬಾರೆ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ದುಬಾರೆಯ ರಿವರ್  ರಾಫ್ಟಿಂಗ್ ಗೈಡ್ಸ್ ಅಂಡ್ ಓನರ್ಸ್ ಅಸೋಸಿಯೇಷನ್,  ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಸ್ಥಳೀಯ ವರ್ತಕರು, ಹಾಗೂ ಸಾರ್ವಜನಿಕರ ಸಹಯೋಗದಲ್ಲಿ  ಪ್ರವಾಸಿ ತಾಣದ ಸುತ್ತಮುತ್ತಲಿನ ಪರಿಸರದಲ್ಲಿ ಎಸೆಯಲಾಗಿದ್ದ ಕಸ ತ್ಯಾಜ್ಯವನ್ನು ಶ್ರಮದಾನದ ಮೂಲಕ ಆಯ್ದು ಶೇಖರಿಸಿ ಟ್ರ್ಯಾಕ್ಟರ್ಗಳಲ್ಲಿ ಕಸ ಸಂಸ್ಕರಣ ಘಟಕಕ್ಕೆ ಸಾಗಿಸಲಾಯಿತು .

ಶುಚಿತ್ವಕ್ಕೆ ಒತ್ತು ನೀಡವ ನಿಟ್ಟಿನಲ್ಲಿ ಇಂದು ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ಪ್ರವಾಸಿ ಸ್ಥಳಗಳು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸ್ವಚ್ಚ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ,ಪ್ರವಾಸೋಧ್ಯಮ ಇಲಾಖೆ, ಕೊಡಗು. ರೋಟರಿ, ಲಯನ್ಸ್, ರೆಡ್ ಕ್ರಾಸ್, ಚೇಂಬರ್ ಆಫ್ ಕಾಮರ್ಸ್, ಹೋಟೆಲ್ ಅಸೊಸಿಯೇಷನ್, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!