ಕೊಡಗರಹಳ್ಳಿ ಜ.15: ಕಂಬಿಬಾಣೆಯ ಬ್ರಹ್ಮಜ್ಞಾನ ಧ್ಯಾನ ಮಂದಿರದಲ್ಲಿ (ವೇದ ವಿದ್ಯಾರ್ಥಿ ವೃಂದ) ಜನವರಿ 18ರ ಭಾನುವಾರ ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಗೀತಾಜ್ಞಾನ ಯಜ್ಞ ವನ್ನು ಆಯೋಜಿಸಲಾಗಿದೆ. ಪಂಡಿತ ಲೋಕಾನಂದ ಆರ್ಯ, ವೇದೋಕ್ತ ಧರ್ಮ ಪ್ರಚಾರಕರು, ದಕ್ಷಿಣ ಭಾರತ ಸರ್ವಾದೇಶಿಕ ಆರ್ಯ ಪ್ರತಿನಿಧಿ ಸಭಾ ದೆಹಲಿ, ಇವರ ಉಪಸ್ಥಿತಿಯಲ್ಲಿ ಗೀತಾ ಜ್ಞಾನಯಜ್ಞ ನಡೆಯಲಿದೆ. ಹಾಗೂ ಈ ಸಂದರ್ಭ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಥವಾ ಅವರ ಪೋಷಕರಿಗೆ ಶ್ರೀ ಬ್ರಹ್ಮಜ್ಞಾನ – ಧ್ಯಾನ ಮಂದಿರದಲ್ಲಿ (ವೇದ ವಿದ್ಯಾರ್ಥಿ ವೃಂದ) ಶ್ರೀಮದ್ ಭಗವದ್ಗೀತಾ ಗ್ರಂಥವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಶ್ರೀ ಬ್ರಹ್ಮಜ್ಞಾನ ಧ್ಯಾನಮಂದಿರದ (ವೇದ ವಿದ್ಯಾರ್ಥಿ ವೃಂದ) ಕಾರ್ಯಕಾರಿ ಸಮಿತಿಯ ಸದಸ್ಯರಾದ ರಘುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ 7760878559 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಮನವಿ ಮಾಡಿದ್ದಾರೆ




