ನಾಪೋಕ್ಲು ಏ.11: ಚೇನಂಡ ಹಾಕಿ ಸಮಿತಿ ವತಿಯಿಂದ ನಾಳೆ 12/4/26 ರಂದು ಬೆಳಿಗ್ಗೆ 11ಗಂಟೆಗೆ ಚೆರಿಯ ಪರಂಬು ಹಾಕಿ ಕ್ರೀಡಾಂಗಣದ ಸಭಾಂಗಣದಲ್ಲಿ ಕಾಫಿ ಬೆಳೆ ಕುರಿತಾಗಿ ವಿಚಾರ ಸಂಕಿರಣ ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳಾದ ಡಾ.ಜೀನಾ, ಡಾ. ನಡಾಫ್ ಹಾಗೂ ಶ್ರೀ ಲಕ್ಷ್ಮೀಕಾಂತ್ ಅವರುಗಳು ಭಾಗವಹಿಸಲಿದ್ದು, ವಿಚಾರ ಸಂಕಿರಣದಲ್ಲಿ ಮಣ್ಣಿನ ಫಲವತ್ತತೆ ಪರೀಕ್ಷೆ ಆದಾರದ ಮೇಲೆ ಕೃಷಿ ಭೂಮಿಗೆ ಗೊಬ್ಬರ ಹಾಗೂ ಸುಣ್ಣವನ್ನು ಹಾಕುವ ಕುರಿತಾಗಿ ಮಾಹಿತಿ ನೀಡಲಿದ್ದಾರೆ. ಹಾಗೂ ಕಾಫಿ ಬೆಳೆಯಲ್ಲಿ ಹೆಚ್ಚಿನ ಇಳುವರಿ, ಮಾರಾಟ ಹಾಗೂ ಕಾಫಿ ಮಂಡಳಿಯು ಹೊಸದಾಗಿ ಅಬಿವೃದ್ಧಿ ಪಡಿಸಿರುವ ಕಾಫಿ ತಳಿಯ ಕುರಿತಾಗಿ ಮಾಹಿತಿ ನೀಡಲಿರುವರು





