Google search engine
Home♦️ಇತ್ತೀಚಿನ ಸುದ್ದಿಗಳು.ಗುಡ್ಡೆಹೊಸೂರಿನಲ್ಲಿ ಬಾಜಪ ಮಹಾಶಕ್ತಿ  ಕೇಂದ್ರದ ಪದಾಧಿಕಾರಿಗಳ ಆಯ್ಕೆ ಸಭೆ.ಅಧ್ಯಕ್ಷರಾಗಿ  ಕೆ ಎಂ ರಮೇಶ್ , ಹಾಗೂ...

ಗುಡ್ಡೆಹೊಸೂರಿನಲ್ಲಿ ಬಾಜಪ ಮಹಾಶಕ್ತಿ  ಕೇಂದ್ರದ ಪದಾಧಿಕಾರಿಗಳ ಆಯ್ಕೆ ಸಭೆ.ಅಧ್ಯಕ್ಷರಾಗಿ  ಕೆ ಎಂ ರಮೇಶ್ , ಹಾಗೂ ಕಾರ್ಯದರ್ಶಿಗಳಾಗಿ ಅರುಣ್ ಆಚಾರಿ, ನೇಮಕ.

ಕುಶಾಲನಗರ,ಮಾ. 29: ಇಂದು ಗುಡ್ಡೆಹೊಸೂರು ಸಮುದಾಯ ಭವನದಲ್ಲಿ  ಬಿಜೆಪಿ ಕಾರ್ಯಕರ್ತರ  ಸಭೆ ಜರುಗಿತು, ಭಾಜಪ ಗುಡ್ಡೆಹೊಸೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಶಿಕುಮಾರ್  ಅವರ ಅಧ್ಯಕ್ಷತೆಯಲ್ಲಿ  ಜರುಗಿದ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತಾಗಿ ಸುದೀರ್ಘ ಸಮಾಲೋಚನೆ ನಡೆಸಿ ನಾಲ್ಕು ಪಂಚಾಯತಿ ಪರಿಮಿತಿ ಒಳಗೊಂಡು ಪಕ್ಷ ಸಂಘಟನೆಯ ಒತ್ತು  ನೀಡುವ ದೃಷ್ಟಿಯಿಂದ ಮಹಾಶಕ್ತಿ  ಕೇಂದ್ರದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ,  ಅಧ್ಯಕ್ಷ  ಸ್ಥಾನಕ್ಕೆ  ಕೆ ಎಂ ರಮೇಶ್ , ಹಾಗೂ ಕಾರ್ಯದರ್ಶಿಗಳಾಗಿ ಅರುಣ್ ಆಚಾರ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ಇದೇ ಸಂದರ್ಭದಲ್ಲಿ ಸೋಮವಾರಪೇಟೆ ಮಂಡಲ ಅಧ್ಯಕ್ಷರಾದ ಗೌತಮ್ ಗೌಡ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಆರ್. ಕೆ ಚಂದ್ರ, ಮಂಡಲದ ಉಪಾಧ್ಯಕ್ಷ ಅಜಿತ್ ಕುಮಾರ್, ಹೊಸಕೋಟೆ ಶಕ್ತಿ ಕೇಂದ್ರ ಅಧ್ಯಕ್ಷ ರಾಮಚಂದ್ರ, ಮಡಿಕೇರಿ ಒಬಿಸಿ ಮೋರ್ಚಾ ಅಧ್ಯಕ್ಷರು, ಹಾಗೂ ಸುಂಟಿಕೊಪ್ಪ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುನಿಲ್, ಗುಡ್ಡೆ ಹೊಸೂರು ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಮ್ಯ, ಮಾಜಿ ಶಕ್ತಿ ಕೇಂದ್ರ ಅಧ್ಯಕ್ಷರು, ಮಂಡಲದ ತಾಲೂಕು ಹಾಲಿ ಕಾರ್ಯದರ್ಶಿ ಕೊಡೇಕಲ್ ನಿತ್ಯಾನಂದ. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಕ್ಷಿತ್ ಮಾವಜಿ, ಬಿ.ಎನ್.ಕಾಶಿ, ಕೊಡೇಕಲ್ ಚಿದಾನಂದ ಹಾಗೂ ಗುಡ್ಡೆ ಹೊಸೂರು, ನಂಜರಾಯಪಟ್ಟನ,ಕೊಡಗರಹಳ್ಳಿ,ಹೊಸಕೋಟೆ,ಪಂಚಾಯಿತಿಯ ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!