Google search engine
Home♦️ ಓದುಗರ ಪತ್ರ ಹಾಗೂ ಲೇಖನಗಳುಕ್ಯಾನ್ಸರ್  ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಚಿಕಿತ್ಸೆಗೆ ಸಹಕರಿಸಿದ ಸಹೃದಯಿಗಳಿಗೆ ಧನ್ಯವಾದ ಅರ್ಪಿಸಿದ  ಕುಟುಂಬಸ್ಥರು.

ಕ್ಯಾನ್ಸರ್  ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಚಿಕಿತ್ಸೆಗೆ ಸಹಕರಿಸಿದ ಸಹೃದಯಿಗಳಿಗೆ ಧನ್ಯವಾದ ಅರ್ಪಿಸಿದ  ಕುಟುಂಬಸ್ಥರು.

,,✍️✍️✍️✍️   ಬಿಟ್ಟಂಗಾಲ, ಬಾಳುಗೋಡು ಗ್ರಾಮದ, ರತ್ನ ವನಿತಾ ಹಾಗೂ ಕುಟುಂಬಸ್ಥರು

ಬಿಟ್ಟಂಗಾಲ ಹೋಬಳಿ, ಬಾಳುಗೋಡು ಗ್ರಾಮದ, ಕಂಡಿಮಕ್ಕಿ ನಿವಾಸಿಯಾದ ನಮ್ಮ ತಾಯಿ ಜಾನಕಿಯು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ನಾವುಗಳು ತೋಟದಲ್ಲಿ ಕೂಲಿ ಕೆಲಸ ಮಾಡಿ ನಮ್ಮ ಜೀವನವನ್ನು ಸಾಗಿಸುತ್ತಿದ್ದು, ನಮ್ಮ ಬಡತನದಲ್ಲಿ ಈ ಆರೋಗ್ಯದ ಸಂಕಷ್ಟವನ್ನು ನಿವಾರಿಸಲು ಕಷ್ಟಸಾಧ್ಯ ಎನ್ನುವ ಸಂದರ್ಭದಲ್ಲಿ, ಬಿಟ್ಟಂಗಾಲ ವಲಯದ ನಾಯಕರಾದ ಅಟ್ರಂಗಡ ಲೋಹಿತ್ ರವರನ್ನು ಸಂಪರ್ಕಿಸಿದಾಗ, ಅವರು ಈ ವಿಷಯವನ್ನು, ನಮ್ಮ ಮಾನ್ಯ ಶಾಸಕರಾದ ಎ ಎಸ್ ಪೊನ್ನಣ್ಣನವರ ಗಮನಕ್ಕೆ ತಂದರು. 

ಮಾನ್ಯ ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಶಾಸಕರ ಜೊತೆಗೂಡಿ ಬಡವರಿಗೆ ಸೇವೆ ಸಲ್ಲಿಸುತ್ತಿರುವ  ಸಾಮಾಜಿಕ ಕಾರ್ಯಕರ್ತರಾದ ಚೋಕಂಡ ಸಂಜು ಸುಬ್ಬಯ್ಯರವರೊಂದಿಗೆ ವಿಮರ್ಶೆ ಮಾಡಿ, ಶಾಸಕರ ವಿನಂತಿಯಂತೆ ಸಂಜು ಸುಬ್ಬಯ್ಯರವರು, ನಾರಾಯಣ ಹೆಲ್ತ್ ಮೈಸೂರಿನ ಆಸ್ಪತ್ರೆಯಲ್ಲಿ 6.50 ಲಕ್ಷ ಮೇಲ್ಪಟ್ಟ ವೆಚ್ಚದ ಕೀಮೋಥೆರಪಿ ಹಾಗೂ ರೇಡಿಯಶನ್ ಥೆರಪಿ ಚಿಕಿತ್ಸೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ವೈದ್ಯರೊಂದಿಗೆ ಸಂಪರ್ಕಿಸಿ, ಬಿಪಿಎಲ್ ಕಾರ್ಡ್ ಹೊಂದಿರುವುದರಿಂದ, ABARK ಎಂಬ ಸರ್ಕಾರದ ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತವಾಗಿ ದೊರಕಿಸಿಕೊಟ್ಟು, ನಂತರದ ಪ್ರತೀ ತಿಂಗಳಿಗೆ 13,000/- ವೆಚ್ಚ ತಗಲುವಂತ ಮಾತ್ರೆಗಳನ್ನು, ಅಲ್ಲಿನ ಚಿಕಿತ್ಸೆ ನೀಡಿದ ವೈದ್ಯರಾದ ಡಾ.ಲೇಪಾಕ್ಷಿಯವರೊಂದಿಗೆ ಚರ್ಚಿಸಿ, ಮಾತ್ರೆಗಳನ್ನು ಕಡಿಮೆ ದರದಲ್ಲಿ ದೊರಕಿಸಿಕೊಡುವಂತೆ  ಅವರೊಂದಿಗೆ ವಿನಂತಿಸಿದ ಸಂದರ್ಭದಲ್ಲಿ, ಕೇವಲ 3,000/- ರೂಗಳಲ್ಲಿ ದೊರಕಿಸಿಕೊಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ನಮ್ಮೊಟ್ಟಿಗೆ ಹಂತ ಹಂತವಾಗಿ ನಿಂತು ನಮ್ಮ  ಆರೋಗ್ಯದ ಸಮಸ್ಯೆಯನ್ನು ನೀಗಿಸಿಕೊಟ್ಟಿರುತ್ತಾರೆ. 

ಈ ಎಲ್ಲಾ ಆರೋಗ್ಯದ ಸಮಸ್ಯೆಯನ್ನು ಬಗೆಹರಿಸಿಕೊಟ್ಟು ನಮ್ಮ ಕುಟುಂಬದ ಸದಸ್ಯರಿಗೆ ನೆಮ್ಮದಿ ನೀಡಿದಂತ ನಮ್ಮೆಲ್ಲರ ನೆಚ್ಚಿನ  ಶಾಸಕರಾದ ಶ್ರೀ. ಎ ಎಸ್ ಪೊನ್ನಣ್ಣನವರಿಗೂ, ಅವರೊಟ್ಟಿಗೆ ಕೈ ಜೋಡಿಸಿ ಬಡವರಿಗೆ ಆರೋಗ್ಯದ ತುರ್ತುಪರಿಸ್ಥಿತಿಯಲ್ಲಿ ನಮಗೆ, ಹೆಚ್ಚು ಮುತುವರ್ಜಿ ವಹಿಸಿ ಸಹಾಯ ಮಾಡಿದ ಶ್ರೀ. ಚೋಕಂಡ ಸಂಜು ಸುಬ್ಬಯ್ಯ ರವರಿಗೂ, ನಮ್ಮ ಬಿಟ್ಟಂಗಾಲ ವಲಯ ಅಧ್ಯಕ್ಷರಾದ ಅಟ್ರಂಗಡ ಲೋಹಿತ್ ರವರಿಗೂ ನಮ್ಮ ಪರಿವಾರದ ಸದಸ್ಯರೆಲ್ಲರೂ ನಮ್ಮೆಲ್ಲರ ಮನದಾಳದ ತುಂಬುಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ. .🙏🙏🙏🙏

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!