Google search engine
Home♦️ಇತ್ತೀಚಿನ ಸುದ್ದಿಗಳು.ಕೊಡವ ತಕ್ಕ್ ಎಳ್ತ್'ಕಾರಡ ಕೂಟದ 200ನೆ ಪುಸ್ತಕಕ್ಕೆ ಕೊಡವ ಭಾಷೆಯ ಲೇಖನಗಳ ಆಹ್ವಾನ

ಕೊಡವ ತಕ್ಕ್ ಎಳ್ತ್’ಕಾರಡ ಕೂಟದ 200ನೆ ಪುಸ್ತಕಕ್ಕೆ ಕೊಡವ ಭಾಷೆಯ ಲೇಖನಗಳ ಆಹ್ವಾನ

ಶ್ರೀಮಂಗಲ.ಮಾ೦4:  ಪ್ರತೀ ತಿಂಗಳಿಗೊಂದು ನೂತನ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊಡವ ಸಾಹಿತ್ಯ  ಲೋಕದಲ್ಲಿ ವಿಶೇಷ ಸಂಚಲನ ಸ್ರಷ್ಠಿಸಿದ ಪ್ರತಿಷ್ಠಿತ ಸಾಹಿತ್ಯಿಕ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್’ಕಾರಡ ಕೂಟವು ತನ್ನ ಹೆಮ್ಮೆಯ “ಜನಪ್ರಿಯ ಕೊಡವ ಸಾಹಿತ್ಯ ಮಾಲೆ” ಯೋಜನೆಯ 200ನೆ ಪುಸ್ತಕವನ್ನು ಎಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದು, ಲೇಖಕರಿಂದ ವಿವಿಧ ಕೊಡವ ಲೇಖನಗಳನ್ನು ಆಹ್ವಾನಿಸಿದೆ.

      200 ವಿವಿಧ ಕೊಡವ ಲೇಖನಗಳುಳ್ಳ ‘ಕೊಡವ ತಕ್ಕ್ ಎಳ್ತ್’ಕಾರಡ ಕೂಟ’ದ 200ನೆ ಪುಸ್ತಕಕ್ಕೆ ಲೇಖಕರು ಇದುವರೆಗೆ ಎಲ್ಲೂ ಪ್ರಕಟವಾಗದ ತಮ್ಮ ಸ್ವ ರಚನೆಯ ಕೊಡವ ಭಾಷೆಯ 4 ಸಾಲು ಮೀರದ ಚುಟುಕ, 10 ಸಾಲು ಮೀರದ ಕವನ, 1000 ಶಬ್ದ ಮೀರದ ಸಣ್ಣ ಕಥೆ, ಪ್ರಬಂಧ, 500 ಶಬ್ದ  ಮೀರದ ವೈಚಾರಿಕ ಲೇಖನ, ಕೊಡವ ಕಿರು ನಾಟಕ, ಆರೋಗ್ಯ, ಶಿಕ್ಷಣ, ಆಯುರ್ವೇದ, ನಾಟಿ ಔಷಧ(ಮನೆ ಮದ್ದ್), ಪದ್ದತಿ, ಸಂಸ್ಕೃತಿ, ಹಬ್ಬಗಳ ಬಗೆಗಿನ ಲೇಖನ, 200 ಶಬ್ದ ಮೀರದ ಹಾಸ್ಯ ಲೇಖನ, ಪ್ರಕಟಣೆಗೆ ಯೋಗ್ಯವಾದ ವ್ಯಂಗ್ಯಚಿತ್ರ, ಗಾದೆ- ಜಾನಪದ ಸೇರಿದಂತೆ ವಿವಿಧ ಲೇಖನಗಳನ್ನು ಮಾರ್ಚ್ 15ನೆ ತಾರೀಖಿನ ಒಳಗೆ ಅಧ್ಯಕ್ಷರು, ಕೊಡವ ತಕ್ಕ್ ಎಳ್ತ್’ಕಾರಡ ಕೂಟ, C/O ಕರ್ನಾಟಕ ಒನ್ ಕಛೇರಿ, ಅತ್ರೇಯ ಆಸ್ಪತ್ರೆ ಎದುರು,

 ವೀರಾಜಪೇಟೆ ಇಲ್ಲಿಗೆ ತಲುಪಿಸಬೇಕು. 

 ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆಯಲ್ಲಿ ಬರೆಯಲು ಮುಕ್ತ ಅವಕಾಶವಿದ್ದು, ಭಾವನೆಗಳಿಗೆ ಧಕ್ಕೆಯಾಗದ ಪ್ರಕಟಣೆಗೆ ಯೋಗ್ಯವಾದ ಲೇಖನಗಳನ್ನು ‘ಕೂಟ’ದ 200ನೆ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ 9880584732 / 9448326014 / 9449998789 ಮೊಬೈಲ್ ನಂಬರನ್ನು ಸಂಪರ್ಕಿಸಬಹುದೆಂದು ‘ಕೂಟ’ದ ಪ್ರಕಟಣೆಯಲ್ಲಿ ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!