Google search engine
Home♦️ಇತ್ತೀಚಿನ ಸುದ್ದಿಗಳು.ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾಧ೯  ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್.ಚೇತನ್, ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವಿರೋಧ...

ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾಧ೯  ಸಹಕಾರಿ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್.ಚೇತನ್, ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವಿರೋಧ ಆಯ್ಕೆ

ಮಡಿಕೇರಿ, ಮಾ. 6:   ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ  ಹೆಚ್.ಎಸ್.ಚೇತನ್   ಅವಿರೋಧವಾಗಿ ಪುನರಾಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆಬ್ರವರಿ 16ರಂದು ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು 17 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಅಧ್ಯಕ್ಷ ಹಾಗೂ ಉಪಾಧಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.  ಅಧ್ಯಕ್ಷ ಸ್ಥಾನಕ್ಕೆ  ಹೆಚ್.ಎಸ್.ಚೇತನ್ ಹಾಗೂ  ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಬಿ.ಸ್ವಾತಿ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ  ನಾಮಪತ್ರ ಸಲ್ಲಿಸಿದ ಹೆಚ್.ಎಸ್.ಚೇತನ್ ಅವರ ಹೆಸರನ್ನು ಟಿ.ಕೆ.ಬಸವರಾಜ್ ಸೂಚಿಸಿದರು. ಡಿ.ಕೆ.ರೇಖಾ ಕುಮಾರಿ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಿ.ಬಿ.ಸ್ವಾತಿ ಅವರ ಹೆಸರನ್ನು ದೇವಾನಂದ ಎಂ.ಸಿ. ಅವರು ಸೂಚಿಸಿದರೇ,  ಡಿ.ಎಂ.ರೇವತಿ ಅನುಮೋದಿಸಿದರು.

ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ  ಹೆಚ್.ಎಸ್.ಚೇತನ್ ಹಾಗೂ ಉಪಾಧ್ಯಕ್ಷರಾಗಿ ಬಿ.ಬಿ.ಸ್ವಾತಿ ಅವರು ಅವಿರೋಧವಾಗಿ ಆಯ್ಕೆಯಾದರು

. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪನಿಬಂಧಕರಾದ ಪಿ.ಬಿ.ಮೋಹನ್ ಕುಮಾರ್ ಕಾರ್ಯನಿರ್ವಹಿಸಿದರು.

ಇದೇ ಸಂದರ್ಭ ಫೆಬ್ರವರಿ 16 ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 17 ಮಂದಿ ನಿರ್ದೇಶಕರಿಗೆ ಸರ್ಟಿಫಿಕೇಟ್ ನೀಡಿ ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರು ಹಾಗೂ ಹಿಂದಿನ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಚ್.ಆರ್. ಮುತ್ತಪ್ಪ ಅವರನ್ನು ಇದೇ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.

ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹೆಚ್.ಎಸ್.ಚೇತನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಬಿ.ಸ್ವಾತಿ ಅವರನ್ನು ಸಂಘದ ನಿರ್ದೇಶಕರು ಅಭಿನಂದಿಸಿದರು.

ಈ ಸಂದರ್ಭ ಸಂಘದ ನೂತನ ಅಧ್ಯಕ್ಷ ಹೆಚ್.ಎಸ್.ಚೇತನ್  ಪ್ರತಿಕ್ರಿಯಿಸಿ,  ,ತಮ್ಮ ಅಧಿಕಾರವಧಿಯಲ್ಲಿ ಪ್ರತಿಷ್ಟಿತ ಸಂಘವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಲಾಗುವುದು. ಮಡಿಕೇರಿಯಲ್ಲಿ ಉದ್ದೇಶಿತ ಗುರುಸದನ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಅಲ್ಲದೇ,  ಮೈಸೂರು ವಿಭಾಗಕ್ಕೂ ಸಂಘದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಎಂದು ಹೇಳಿದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಬಿ.ಸ್ವಾತಿ   ಮಾತನಾಡಿ, ಪ್ರತಿಷ್ಠಿತ ಕೊಡಗು ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!