
ಮಡಿಕೇರಿ ಜ.16: ಕೊಡಗು ರೈತಸಂಘದಿಂದ ಕಾಡ್ಯಮಾಡ ಮನು ಸೋಮಯ್ಯನವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಭೇಟಿ
ಈ ಸಂದರ್ಭ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ಮಾಡಲಾಯಿತು. ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಶಾಸನಾತ್ಮಕವಾಗಿ,ಕಾನೂನಿನಡಿ ಜಾರಿಗೊಳಿಸಬೇಕು. ರೈತರ ಕೃಷಿ ಭೂಮಿಯನ್ನು ರಕ್ಷಿಸಲು ಅರಣ್ಯದೊಳಗೆ ಪ್ರವಾಸೋದ್ಯಮವನ್ನು ನಿಷೇಧಿಸಬೇಕು ಕೊಡಗಿನಲ್ಲಿ ವನ್ಯ ಪ್ರಾಣಿ ಮಾನವ ಸಂಘರ್ಷ ನಿಲ್ಲಿಸಲು 500 ಕೋಟಿ ವಿಷೇಶ ಪ್ಯಾಕೇಜನ್ನು ಘೋಷಣೆ ಮಾಡಬೇಕು. ಶೀಘ್ರದಲ್ಲಿಯೇ ಸಿ ಅಂಡ್ ಡಿ ಜಮೀನು ವಿವಾದಗಳನ್ನು ಬಗೆಹರಿಸಿ, ರೈತರು ಕಾನೂನಾತ್ಮಕವಾಗಿ ಜಮೀನುಗಳನ್ನು ರೂಢಿಸಿಕೊಂಡು ಹೋಗುವಂತೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಬೇಕು, ರೈತರ ಹಿತದೃಷ್ಠಿಯಿಂದ ಸರ್ಫೇಸಿ ಆಕ್ಟ್ ಅನ್ನು ಶೀಘ್ರದಲ್ಲಿಯೇ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು.
ರೈತರಿಗೆ ಸೋಲಾರ್ ಸಬ್ಸಿಡಿಯುಶೇ 80 ರಷ್ಟು ದೊರಕಲು ಕ್ರಮ ವಹಿಸಬೇಕು ಎಂಬುದರ ಕುರಿತು ಸಚಿವರೊಡನೆ ಚರ್ಚಿಸಿದರು ಹಾಗೂ NDRF ನಿಂದ ಬೆಳೆನಷ್ಟ ಪರಿಹಾರ ದೊರಕಲು ಶೀಘ್ರ ಕೇಂದ್ರ ವರಿಷ್ಠರ ಜೊತೆ ಮಾತುಕತೆ ಮಾಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭ ರೈತಸಂಘದ ಜಿಲ್ಲೆ , ತಾಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು ಹಾಗೂ ರೈತಮುಖಂಡರು ಭಾಗವಹಿಸಿದ್ದರು.




