ಸುಂಟಿಕೊಪ್ಪ, ಮಾ.23: ಕೊಡಗು ಪತ್ರಕರ್ತರ ಸಂಘ( ರಿ) ಕುಶಾಲನಗರ ತಾಲೂಕು ಘಟಕದ ಮಾಸಿಕ ಸಭೆಯು ದಿನಾಂಕ ಮಾರ್ಚ್ 21 ರ ಶನಿವಾರದಂದು ಸುಂಟಿಕೊಪ್ಪ ಪಟ್ಟಣದ ಹೋಟೆಲ್ ದ್ವಾರಕ ಸಭಾಂಗಣದಲ್ಲಿ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾದ ಬಿ.ಸಿ. ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆದು, ಉಪಾಧ್ಯಕ್ಷರನ್ನಾಗಿ ನವೀನ್ ಚಿನ್ನಪ್ಪ, ಖಜಾಂಜಿಯಾಗಿ ಕೆ.ಎಸ್.ಅನಿಲ್ ಕುಮಾರ್ , ಸಹ ಕಾರ್ಯದರ್ಶಿಯಾಗಿ ರವಿಕುಮಾರ್ ಬಿ.ಎನ್ ಆವರುಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಜಿಲ್ಲಾ ಖಜಾಂಜಿಗಳಾದ ಟಿ.ಕೆ.ಸಂತೋಷ್, ಸಂಘದ ಹಿರಿಯ ಸಲಹೆಗಾರರಾದ ಕೆ.ತಿಮ್ಮಪ್ಪ, ಆರ್.ಕೆ.ಬಾಲಚಂದ್ರ, ಸೇರಿದಂತೆ ಇತರೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು




