ಕೊಡಗು ಜಿಲ್ಲೆಗೆ ಕೆಲಸಕ್ಕಾಗಿ ಆಗಮಿಸಿರುವ ಅನ್ಯ ರಾಜ್ಯಗಳ ಕಾರ್ಮಿಕರ ಚಟುವಟಿಕೆಗಳ ಬಗ್ಗೆ ಕಳವಳ ವ್ಯಪಡಿಸಿ , ಅಕ್ರಮ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಸದನದ ಗಮನ ಸೆಳೆದ – ಶಾಸಕರಾದ ಡಾ.ಮಂತರ್ ಗೌಡ
ಹೊರರಾಜ್ಯಗಳಿಂದ ಅದರಲ್ಲೂ ವಿಶೇಷವಾಗಿ ಅಸ್ಸಾಂ ಬಿಹಾರ ಮೂಲ ಎಂದು ಹೇಳಿಕೊಳ್ಳುವ ಅನೇಕ ಕಾರ್ಮಿಕರು ಕೊಡಗಿನಾದ್ಯಂತ ಕಾಫಿ ತೋಟಗಳಲ್ಲಿ ಸೇರಿಕೊಂಡಿದ್ದು . ಅವರಲ್ಲಿ ಹಲವರು ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳಾದ ಸುಲಿಗೆ, ವಂಚನೆ ಪ್ರಕರಣ, ಮಾದಕವಸ್ತು ಸರಬರಾಜು , ರೇಪ್ ಕೇಸುಗಳು , ಪಶುವದೆ ಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಈ ಹೊರ ರಾಜ್ಯದ ಕಾರ್ಮಿಕರ ಮೇಲೆ 2024 ರಲ್ಲಿ 21, ಹಾಗೂ 2025 ರಲ್ಲಿ 62 ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳು ದಾಖಲಾಗಿವೆ ಎಂದು ಬೆಳಗಾವಿ ಅಧಿವೇಶನದ ಸದನದಲ್ಲಿ ಈ ಗಂಭೀರ ವಿಷಯ ಪ್ರಸ್ತಾಪಿಸಿ ಗೃಹ ಮಂತ್ರಿಗಳಾದ ಡಾಕ್ಟರ್ ಪರಮೇಶ್ವರ್ ಅವರ ಗಮನಕ್ಕೆ ತಂದರು.




