Google search engine

ಕವಿ ಸಮಯ —– ಓ ನನ್ನ ಚೇತನ, ಆಗು ನೀ ಅನಿಕೇತನ” ಎಂದು ವಿಶ್ವಮಾನವ ಸಂದೇಶ ಸಾರಿದ ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು. ಕನ್ನಡದ ಕಂಪನ್ನು ಜಗತ್ತಿಗೆ ಪಸರಿಸಿದ ರಸಋಷಿ, ಕುಪ್ಪಳಿಯ ಪುಟ್ಟಪ್ಪನವರ ಸಾಹಿತ್ಯ ನಮಗೆ ಸದಾ ದಾರಿದೀಪವಾಗಿದೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ)  ಬೆಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್  ಎಸ್. ಉಪ್ಪಾರ್  ವಿರಚಿತ ಕವನಗಳು.

ಕವಿತೆ – ೧   ನನ್ನ ಕವಿತೆ

ಬಾನ ಹಕ್ಕಿಗಳು, ಗಗನ ಚುಕ್ಕಿಗಳು

ನನ್ನ ಹೃದಯ ಕವಿತೆ |

ಎತ್ತರೆತ್ತರಕೆ ಹಾರುತೇರುವ

ಮೋಡದೊಳಗೆ ಅವಿತೆ  ||ಪ||

ಭಿನ್ನ ಭೇದಗಳು, ಜಾತಿ ವರ್ಣಗಳು

ಎಲ್ಲ ಇಲ್ಲಿ ಶೂನ್ಯ |

ನೆಟ್ಟ ದೃಷ್ಟಿಗಳು, ದಿಟ್ಟ ನಿಲುವುಗಳು

ಮಾತ್ರವಿಲ್ಲಿ ಮಾನ್ಯ ||೧||

ಅನ್ಯರೇಳ್ಗೆಯನು ಸಹಿಸದಾಗುತಿವೆ

ತಮ್ಮತನದ ಸುತ್ತ |

ಮನದ ನಡುವಿನಾ ಅಡ್ಡ ಗೋಡೆಗಳ

ಮೆಟ್ಟಿ ಸಾಗು ಅತ್ತ ||೨||

ಬಂಧ ಬಂಧಗಳ, ಗಂಧ ಮಂದಿರವು

ಅರಳಿ ನಿಲ್ಲಬೇಕು |

ಮನದ ಬೃಂದಗಳು, ಭಾವ ರೆಕ್ಕೆಗಳು

ತೆರೆದು ಕೊಳ್ಳಬೇಕು ||೩||

ಕವಿತೆ – ೨. ಅನುರಾಗ

ಇಲ್ಲಿ ಎಲ್ಲೋ ಸುತ್ತಿ ಅಪ್ಪಿದ 

ಪ್ರೀತಿಯ ಗಾಳಿ ಬೀಸುತಿದೆ,

ಕಣ್ಣ ಮುಂದೆ ಸುಳಿದು ಹೋಗುವ

ರೂಪ ಕಾಣದಾಗುತಿದೆ ||ಪ||

ಹೃದಯ ಹೃದಯಗಳ ಬೆಸುಗೆಯ ಕ್ಷಣಗಳು ಮತ್ತೆ ಮತ್ತೆ ಕಾಡುತಿವೆ,

ಚಂದ್ರ ಚಕೋರಿ ರೂಪರಾಶಿಯು

ಕಂಗಳ ದೃಷ್ಟಿಯ ಮುತ್ತುತಿದೆ ||೧||

ಬದುಕಿನ ಅರಮನೆ ಕಟ್ಟುವ ಕನಸಿದೆ

ಬಲದ ಕೊರತೆಯು ಕಾಡುತಿದೆ |

ಕಷ್ಟ ಕಾಲದೊಳು ಕೈಯನು ಹಿಡಿಯುವ

ಸ್ನೇಹದ ಶಕ್ತಿಯು ಮಿಡಿಯುತಿದೆ ||೨||

ಒಣಗಿದೆದೆಯಲಿ ಚಿಲುಮೆ ಚಿಮ್ಮಿರಲು

ಒಲವ ರಾಗದ ಮಿಲನದಲಿ | 

ಹೃದಯದೊಲುಮೆಯ ಸಾಹುಕಾರನ

ಮನವದು ಮಿಡಿಯಿತು ಪ್ರೇಮದಲಿ ||೩||

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!