ಗುಡ್ಡೆಹೊಸೂರು ಏ.,10: ಕುಶಾಲನಗರ ಸಮೀಪದ ರಸಲ್ಪುರ ಗ್ರಾಮದ ದಿವಂಗತ ನಂಗಾರು ಸೋಮಯ್ಯ ರವರ ಪುತ್ರ ನಂಗಾರು ರೂಪೇಶ್ ಅವರು ಪೆರುಬಾಡಿಯ ಬಾಳುಗೋಡುವಿನ ಸರ್ಕಾರಿ ಸೌಮ್ಯದ ಎಕಲವ್ಯ ವಸತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 574 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು, ಜೊತೆಗೆ EMRS ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.




