Google search engine
Home♦️ಇತ್ತೀಚಿನ ಸುದ್ದಿಗಳು.ಇಂದಿನಿಂದ ಪಾಲಿಬೆಟ್ಟದಲ್ಲಿ ರಾಷ್ಟ್ರೀಯ ಮಟ್ಟದ ಪುಟ್ಬಾಲ್ ಪಂದ್ಯಾವಳಿ.ವಿವಿಧ ರಾಜ್ಯಗಳ ತಂಡಗಳು ಜಿಲ್ಲೆಗೆ ಆಗಮನ

ಇಂದಿನಿಂದ ಪಾಲಿಬೆಟ್ಟದಲ್ಲಿ ರಾಷ್ಟ್ರೀಯ ಮಟ್ಟದ ಪುಟ್ಬಾಲ್ ಪಂದ್ಯಾವಳಿ.ವಿವಿಧ ರಾಜ್ಯಗಳ ತಂಡಗಳು ಜಿಲ್ಲೆಗೆ ಆಗಮನ

ಪಾಲಿಬೆಟ್ಟ ಜ.9 :- ಯಂಗ್ ಇಂಡಿಯಾ ಯೂಥ್ ಕ್ಲಬ್ ನ 55ನೇ  ಸುವರ್ಣ ಮಹೋತ್ಸವದ ಸಂಭ್ರಮಕ್ಕಾಗಿ ರಾಷ್ಟ್ರೀಯ ಮಟ್ಟದ ಮುಕ್ತ 5s ಫುಟ್ಬಾಲ್ ಪಂದ್ಯಾವಳಿ ಉತ್ಸವಕ್ಕೆ ಪಾಲಿಬೆಟ್ಟ ಕ್ರೀಡಾ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು  ತಂಡಗಳು ಹಾಗೂ ವೀಕ್ಷಕರಿಗೆ  ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಇಂದಿನಿಂದ ಜನವರಿ 11 ವರೆಗೆ  ನಡೆಯಲಿರುವ  ಹೊನಲು  ಬೆಳಕಿನ ಪಂದ್ಯಾವಳಿಗೆ  ಈಗಾಗಲೇ  ವಿವಿಧ ರಾಜ್ಯಗಳ ತಂಡಗಳು  ಜಿಲ್ಲೆಗೆ ಆಗಮಿಸಿದ್ದಾರೆ.ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿ ಗ್ಯಾಲರಿಯಲ್ಲಿ ನಡೆಯಲಿದ್ದು ಟಾಟಾ ಕಾಫಿ ಸಂಸ್ಥೆ  ಮೈದಾನದ ಸಿದ್ಧತೆಯನ್ನು ಪೂರ್ಣಗೊಳಿಸಿದೆ.  ಕ್ರೀಡಾಪಟುಗಳಿಗೆ  ಬೇಕಾದ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಶುಚಿತ್ವಕ್ಕೂ ಆದಿತ್ಯ ನೀಡಿ  ಸ್ವಚ್ಛ ಸುಂದರ ಪರಿಸರವನ್ನು ನಿರ್ಮಾಣ ಮಾಡಲು  ಟಾಟಾ ಸಂಸ್ಥೆ ಹೆಚ್ಚಿನ ಸಹಕಾರ ನೀಡುತ್ತಿದೆ ಎಂದು  ಯಂಗ್ ಇಂಡಿಯಾ ಯೂಥ್ ಕ್ಲಬ್ ನ ಅಧ್ಯಕ್ಷ  ಪಿ ಎ ಸಲೀಂ  ತಿಳಿಸಿದ್ದಾರೆ. 

ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಮೂವತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು ಜಿಲ್ಲೆಯ ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ಎಂದರು.

ಕಾರ್ಯದರ್ಶಿ ಅಬ್ದುಲ್ ರಶೀದ್ ಮಾತನಾಡಿ ಎಂಗ್ ಇಂಡಿಯಾ ಯೂಥ್ ಕ್ಲಬ್ 55 ವರ್ಷ ಪೂರೈಸಿರುವ ಯುವಕ ಸಂಘ ಹಲವಾರು ಸಮಾಜ ಸೇವ ಕಾರ್ಯಗಳೊಂದಿಗೆ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸುವಲ್ಲಿ  ರಾಜ್ಯಕ್ಕೆ ಮಾದರಿಯಾಗಿದ್ದು 

ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ರಾಷ್ಟ್ರೀಯ ಮಟ್ಟದ ಆಟಗಾರರನ್ನ ಜಿಲ್ಲೆಗೆ ಪರಿಚಯಿಸಲು   ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ  ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯ ಅಂತಿಮ ಪಂದ್ಯಾಟದಲ್ಲಿ ಗೆಲುವು ಸಾಧಿಸಿದ ತಂಡಕ್ಕೆ 1.25 ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 75,000, ತೃತೀಯ ಸ್ಥಾನ ಪಡೆದ ತಂಡಕ್ಕೆ 15,000, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 10,000 ನಗದು ಬಹುಮಾನ ನೀಡಲಾಗುವುದು  ಎಂದರು.

 ಈ ಸಂದರ್ಭ  ಸಂಘದ ಉಪಾಧ್ಯಕ್ಷ ಮುಹಮ್ಮದ್ ಶಮೀಲ್,ಪ್ರಧಾನ ಕಾರ್ಯದರ್ಶಿ ಪಿ ಆರ್ , ಅಬ್ದುಲ್ ಗಪೂರ್ ,ಕೋಶಧಿಕಾರಿ,ಎಂ ಯು ಮುನೀರ್  ಸೇರಿದಂತೆ ಸಂಘದ ಪ್ರಮುಖರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!